ತುಂಗಾವಾಣಿ.
ಗಂಗಾವತಿಯ ಕಂದಾಯ ಅಂಗಳದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಹೈ-ಡ್ರಾಮಾಕ್ಕೆ ಈಗ ಕ್ಲೈಮ್ಯಾಕ್ಸ್ ಸಿಕ್ಕಿದೆ. ಯಾವ ನಾಗರಾಜ್ 'ಅನಾರೋಗ್ಯ'ದ ನೆಪವೊಡ್ಡಿ ದೀರ್ಘಾವಧಿ ರಜೆ ಮೇಲೆ ಜಾರಿಕೊಂಡಿದ್ದರೋ, ಅವರಿಗೆ ಈಗ ಸರ್ಕಾರ ಎತ್ತಂಗಡಿಯ ಬಿಸಿ ಮುಟ್ಟಿಸಿದೆ!
ಆಗಲೇ ನಿರೀಕ್ಷಿತವಾಗಿತ್ತು ಇದರ ಸುಳಿವು ಸಹ ಗಂಗಾವತಿ ಜನತೆಗೆ ಸಿಕ್ಕಿತ್ತು—ಇದು ಕೇವಲ ರಜೆಯಲ್ಲ, ಅಧಿಕಾರದ ಕಬಡ್ಡಿ ಆಟದ ಆರಂಭ ಎನ್ನುವ ಶಂಕೆ ಈಗ ನಿಜವಾಗಿದೆ. ಮಾರ್ಚ್ 13ರಂದು ರಜೆ ಮುಗಿಸಿ ಮರಳಬೇಕಿದ್ದ ತಹಶೀಲ್ದಾರ್ ಯು. ನಾಗರಾಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ಸಹಾಯಕ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ.
ಪವರ್ಫುಲ್ ಗದ್ದುಗೆಯಿಂದ ಅನಾಮಧೇಯ ಹುದ್ದೆಗೆ ಆಗಿರುವ ಈ ವರ್ಗಾವಣೆ ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ, ಇದು ಒಂದು ವ್ಯವಸ್ಥಿತ ‘ಸರ್ಜರಿ’. ಸದ್ಯಕ್ಕೆ ಪ್ರಭಾರಿಯಾಗಿದ್ದ ವಿಶ್ವನಾಥ ಮುರಡಿ ಅವರ ಹೆಗಲಿಗೆ ಪೂರ್ಣ ಜವಾಬ್ದಾರಿ ಹಸ್ತಾಂತರವಾಗಿದ್ದು, ಹಳಿ ತಪ್ಪಿದ್ದ ಆಡಳಿತ ಮತ್ತೆ ವೇಗ ಪಡೆಯುವ ಭರವಸೆ ಮೂಡಿದೆ. ಇದು ಗಂಗಾವತಿಯ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಂಡಿರುವ ಅಗತ್ಯ ಆಡಳಿತಾತ್ಮಕ ಶಸ್ತ್ರಚಿಕಿತ್ಸೆ!
ನೈಜ ಸುದ್ದಿಗಾಗಿ ತುಂಗಾವಾಣಿ.