Tunganews

ಖಾಕಿ ಕಲಿಗಳಿಗೆ ಸಿಎಂ ಪದಕದ ಗರಿ: ಗಂಗಾವತಿಯ 'ಮಾಳಿ'ಗೆ ಗೌರವ

Mar 28, 2026, 02:44 AM IST
ಖಾಕಿ ಕಲಿಗಳಿಗೆ ಸಿಎಂ ಪದಕದ ಗರಿ: ಗಂಗಾವತಿಯ 'ಮಾಳಿ'ಗೆ ಗೌರವ

ನಗರ ಇನ್ಸ್‌ಪೆಕ್ಟರ್ ಪ್ರಕಾಶ್ ಮಾಳಿ, ಸೈಬರ್ ಡಿವೈಎಸ್‌ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್‌ಗೆ ಪ್ರತಿಷ್ಠಿತ ಗೌರವ
ತುಂಗಾವಾಣಿ.
​ಗಂಗಾವತಿ/ಕೊಪ್ಪಳ:
ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಗುರುತಿಸಿ ನೀಡಲಾಗುವ 2025ನೇ ಸಾಲಿನ ಪ್ರತಿಷ್ಠಿತ ‘ಮಾನ್ಯ ಮುಖ್ಯಮಂತ್ರಿಯವರ ಪದಕ’ಗಳ ಪಟ್ಟಿ ಪ್ರಕಟವಾಗಿದ್ದು, ಗಂಗಾವತಿ ಮತ್ತು ಕೊಪ್ಪಳ ಜಿಲ್ಲೆಯ ಅತ್ಯುತ್ತಮ ದಕ್ಷ ಅಧಿಕಾರಿಗಳಿಗೆ ಈ ಬಾರಿ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿದೆ. 

ಗಂಗಾವತಿ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಎಲ್. ಮಾಳಿ ಹಾಗೂ ಕೊಪ್ಪಳ ಸೈಬರ್ ಕ್ರೈಂ ಡಿವೈಎಸ್‌ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್ ಸೇರಿದಂತೆ ಹಲವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

​ಗಂಗಾವತಿಯ ನಂಟು:
ಈ ಬಾರಿಯ ಪದಕ ವಿಜೇತರಲ್ಲಿ ಗಂಗಾವತಿಯ ನಂಟು ಹೊಂದಿರುವವರೇ ಪ್ರಮುಖರು. ಪ್ರಸ್ತುತ ಗಂಗಾವತಿ ನಗರ ಇನ್ಸ್‌ಪೆಕ್ಟರ್ ಆಗಿರುವ ಪ್ರಕಾಶ್ ಎಲ್. ಮಾಳಿ ಅವರು ಸಾರ್ವಜನಿಕರೊಂದಿಗೆ ಸೌಜನ್ಯ ಹಾಗೂ ಅಪರಾಧ ತಡೆಗಟ್ಟುವಲ್ಲಿ ತೋರಿದ ದಕ್ಷತೆಗೆ ಪದಕ ಸಂದಿದೆ. ಇನ್ನು ಕೊಪ್ಪಳ ಸೈಬರ್ ಕ್ರೈಂ ಡಿವೈಎಸ್‌ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್ ಅವರು ಈ ಹಿಂದೆ ಗಂಗಾವತಿಯಲ್ಲಿಯೇ ಡಿವೈಎಸ್‌ಪಿ ಆಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಜನಪ್ರಿಯತೆ ಗಳಿಸಿದ್ದರು. ಈ ಇಬ್ಬರು ಅಧಿಕಾರಿಗಳ ಸಾಧನೆಗೆ ಗಂಗಾವತಿ ಭಾಗದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ

​ವಿದೇಶಿ ಪ್ರಜೆ ಪ್ರಕರಣದ ಕರಾಳತೆ:
ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ವಿದೇಶಿ ಪ್ರಜೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗುವ ಅತಂಕವಿದ್ದಾಗ, ತನಿಖಾ ತಂಡಗಳು ಹಗಲಿರುಳು ಶ್ರಮಿಸಿ ಆರೋಪಿಗಳನ್ನು ಪತ್ತೆಹಚ್ಚಿದ್ದು ದೊಡ್ಡ ಸಾಧನೆಯಾಗಿತ್ತು. ಇಂತಹ ಸವಾಲುಗಳ ಮಧ್ಯೆಯೇ ದಕ್ಷ ಅಧಿಕಾರಿಗಳನ್ನು ಗುರುತಿಸಿ ಸರ್ಕಾರ ಪದಕ ಘೋಷಿಸಿದೆ.

​ಏಪ್ರಿಲ್ 2ಕ್ಕೆ ಪ್ರಧಾನ:
ರಾಜ್ಯಾದ್ಯಂತ ಒಟ್ಟು 152 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪದಕ ಲಭಿಸಿದೆ. ಪದಕ ಪುರಸ್ಕೃತರಿಗೆ ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿಯವರು ಪದಕ ಪ್ರದಾನ ಮಾಡಲಿದ್ದಾರೆ. ತುಂಗಾವಾಣಿ



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize