Tunganews

ಗಂಗಾವತಿ: ನೆಪಗಳ ಸರದಾರ 'ಬಶೀರುದ್ದೀನ್' ಪುರಾಣ. ಇವರ ಮುಂದೆ ಮುಲ್ಲಾ ನಸ್ರುದ್ದೀನನ ಕತೆಗಳೂ ಫೇಲ್!

May 13, 2026, 03:11 AM IST
ಗಂಗಾವತಿ: ನೆಪಗಳ ಸರದಾರ 'ಬಶೀರುದ್ದೀನ್' ಪುರಾಣ. ಇವರ ಮುಂದೆ ಮುಲ್ಲಾ ನಸ್ರುದ್ದೀನನ ಕತೆಗಳೂ ಫೇಲ್!

ತುಂಗಾವಾಣಿ.
ಗಂಗಾವತಿ: " ನಾನು ನಾಳೆ ಕೊಪ್ಪಳಕ್ಕೆ ಹೋಗಬೇಕು, ಮುಂದೆ ಎರಡು ದಿನ ಅಂಜನಾದ್ರಿಗೆ ಹೋಗುವುದು ಇದೆ, ನಂತರ ಬೆಂಗಳೂರಿಗೆ ಹೋಗುತ್ತೇನೆ, ಹೀಗಾಗಿ ನೀವು ಮುಂದಿನ ವಾರ ನನಗೆ ನಿಮ್ಮ ದೂರಿನ ಬಗ್ಗೆ ಕರೆ ಮಾಡಿ ನೆನಪಿಸಿ, ಖಾಲಿ ಇದ್ದರೆ ನೋಡೋಣ, "

    "ಹೌದು, ನಿಮ್ಮ ದೂರಿನ ಪ್ರತಿ ಕಛೇರಿಯಿಂದ ಬಂದಿದೆ, ತಹಶೀಲ್ದಾರರೂ ಕೂಡ ನನಗೆ ಕರೆ ಮಾಡಿ ಹೇಳಿದ್ದಾರೆ, ದೂರಿನ ಪ್ರತಿ ವಾಟ್ಸಪ್ ಗೆ ಹಾಕಿದ್ದಾರೆ, ಬೇರೆ ಕೆಲಸ ಇದೆ ಏನಮಾಡಲಿ ಮುಂದಿನ ವಾರ ನೋಡೋಣ ಇರಿ,"

   "ಅರೆ ! ಈ ಸರ್ವೆ ನಂಬರು ಭೂಪರಿವರ್ತನೆ ಆಗಿದೆ, ನಮಗೆ ಬರೊದಿಲ್ಲ, ನೀವು ನಗರಸಭೆಗೆ ಹೋಗಿ‌ ದೂರು ಕೊಡಿ. ಟೌನ್ ಪ್ಲಾನ್ ಆಪೀಸಿಗೆ ಹೋಗಿ ಬಂದಿರಾ ?"
 
 "  ಈ ಭೂಮಿ N A ಆಗುವಾಗ ನಾನು ಇದ್ದಿಲ್ಲ. "

 " ಆಯ್ತು ಭೂಮಾಪನ ಇಲಾಖೆಯವರು ಖಾಲಿಇಲ್ಲ ಅವರೂ ಕೂಡ ನನ್ನ ಜೊತೆ ಬರಬೇಕು ಆಗ ನಾನು ನಿಮ್ಮ ದೂರಿನ ಬಗ್ಗೆ ವರದಿ ಕೊಡಬಲ್ಲೆ,"

"ನೋಡಿ ಇವರೇ"... ಆ ಸರ್ವೆ ನಂಬರಿಗೇ ಈಗಾಗಲೆ ಒಂದು ದೂರು ಬಂದಿತ್ತು, ಅವರಿಗೆ ಹಿಂಬರಹ ನೀಡಿದ್ದೇನೆ ಅದನ್ನು ಹುಡುಕಿ ನಿಮಗೆ ಕೊಡುತ್ತೇನೆ.

ಈ ಮೇಲಿನವುಗಳು ಗಂಗಾವತಿ ನಾಡಕಛೇರಿ‌ ಕಂದಾಯ ನಿರೀಕ್ಷಕ ( R I ) ಬಶೀರುದ್ದೀನ ರವರ ನೆಪ ಕತೆಗಳು, ಇವರ ನೆಪಕತೆಗಳನ್ನು  ಕಿರುಪುಸ್ತಕದಲ್ಲಿ ಪ್ರಕಟಿಸಿದ್ದಲ್ಲಿ "ಮುಲ್ಲಾ ನಶ್ರೂದ್ದೀನನ ನೀತಿಕತೆ" ಗಳನ್ನೂ ಮೀರಿಸುತ್ತವೆ, ಏಕೆಂದರೆ ಇಂತಹ ನೆಪಕತೆಗಳನ್ನು ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳು ಪುಸ್ತಕ ಕೊಂಡು ಓದಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಅಷ್ಟು ಮಾರ್ಮಿಕವಾಗಿರುತ್ತವೆ ಅವರ ನೆಪಗಳು.

ಗಂಗಾವತಿ ನಗರದಲ್ಲಿನ ಸರ್ಕಾರಿ ಭೂಮಿಗಳು ಭೂಗಳ್ಳರು ಕಬಳಿಸಿಕೊಂಡು ಕಂಪೌಂಡು ಕಟ್ಟಿಕೊಳ್ಳುತ್ತಿದ್ದಾರೆ, ಸರ್ಕಾರಿ ಭೂಮಿಗಳನ್ನು‌ ಸಂರಕ್ಷಿಸಿಕೊಳ್ಳುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯವಾಗಿದ್ದು ಸದರಿ ಸರಕಾರಿ ಭೂಮಿಗಳನ್ನು ಭೂಗಳ್ಳರು ಬಡವರರಿಗೆ ಕಡಿಮೆ ಬೆಲೆಯ ಅಮೀಷಕ್ಕೆ ಮಾರಾಟ ಮಾಡಿ ಬಡವರಿಗೆ ವಂಚಿಸಲಿದ್ದಾರೆ, ಪರಿಶೀಲನೆ ಮಾಡಿ ಬೇಗನೇ ಸರ್ಕಾರಿ ಭೂಮಿ  ಭೂಗಳ್ಳರಿಂದ ವಾಪಸ್ಸು ಪಡೆಯಿರಿ ಎಂದು ದಾಖಲೆ ಸಮೇತ ತಹಶೀಲ್ದಾರರಿಗೆ ಮಾರ್ಚ್-16 -2026 ರಂದು ಲಿಖಿತ ದೂರು ಕೊಟ್ಟಿದ್ದು ಇರುತ್ತದೆ, ಅದರಂತೆ ತಹಶಿಲ್ದಾರರು ಗಂಗಾವತಿ ರವರು ಮಾರ್ಚ್-20  -2026 ಕಂದಾಯ ನಿರೀಕ್ಷಕರಿಗೆ ಮತ್ತು ತಾಲೂಕಾ ಭೂಮಾಪಕರಿಗೆ ಮೆಮೊ ನೀಡಿ, ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸಿರುತ್ತಾರೆ, 

ಗಂಗಾವತಿ ನಾಡಕಛೇರಿಯಿಂದ ಒಂದರೆಡು ಕಿ ಮೀ ಅಂತರದಲ್ಲಿರುವ  ಸ್ಥಳಕ್ಕೆ ಹೋಗಲು ಈ  ಅಧಿಕಾರಿಗೆ ಆಗುತ್ತಿಲ್ಲ ಆದರೆ ಇವರ ಬಳಿ ನೂರಾರು ಕುಂಟುನೆಪಗಳು ತಯಾರಿದ್ದು ಪ್ರತಿ ಬಾರಿ ಹೊಸ ಹೊಸ ನೆಪಕತೆಗಳನ್ನು ಹೇಳಿ ಕಳುಹಿಸುತ್ತಾನೆ.

ಆದರೆ, ದಿನಕ್ಕೊಂದು ಹೊಸ ಕತೆ ಹೇಳುತ್ತಿರುವ ಆರ್‌ಐ ಬಶೀರುದ್ದೀನ್ ಅವರ ವಿಳಂಬ ನೀತಿಯಿಂದಾಗಿ ಭೂಗಳ್ಳರಿಗೆ ರಾಜಮರ್ಯಾದೆ ಸಿಕ್ಕಂತಾಗಿದೆ. ಅತ್ತ ಭೂಗಳ್ಳರು ಸರ್ಕಾರಿ ಜಾಗವನ್ನು ಸೈಟುಗಳನ್ನಾಗಿ ಮಾಡಿ ಅಮಾಯಕ ಬಡವರಿಗೆ ಕಡಿಮೆ ಬೆಲೆಗೆ ಮಾರಿ ವಂಚಿಸಲು ಹೊಂಚು ಹಾಕುತ್ತಿದ್ದಾರೆ. ಅಧಿಕಾರಿಗಳ ಇಂತಹ ಕುಂಟು ನೆಪಗಳು ಭೂಗಳ್ಳರಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಿರುವಂತೆ ಭಾಸವಾಗುತ್ತಿದೆ.

​ಸರ್ಕಾರಿ ಆಸ್ತಿ ಉಳಿಸಬೇಕಾದವರೇ ಹೀಗೆ ನೆಪಗಳ ಬೆನ್ನತ್ತಿ ಹೋದರೆ, ಗಂಗಾವತಿಯ ಸರ್ಕಾರಿ ಜಾಗಗಳು ಉಳಿಯುವುದಾದರೂ ಹೇಗೆ? ಮೇಲಧಿಕಾರಿಗಳು ಇನ್ನಾದರೂ ಇವರ 'ಕತೆ'ಗಳನ್ನು ಕೇಳುವುದನ್ನು ನಿಲ್ಲಿಸಿ, ಕೆಲಸ ಮಾಡುವಂತೆ ಸೂಚಿಸುವರೇ ಕಾದು ನೋಡಬೇಕಿದೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize