Tunganews

ಬಿಜೆಪಿ ಹಿರಿಯರ ಮಾಸ್ಟರ್ ಪ್ಲಾನ್ ಸಕ್ಸಸ್: ಜಿದ್ದಾಜಿದ್ದಿನ ಕಣದಲ್ಲಿ ಚನ್ನಪ್ಪ ಮಳಗಿಗೆ "ಪಟ್ಟ", ನಾರಾಯಣಪ್ಪ ನಾಯಕ 'ತ್ಯಾಗ'!

ಬಿಜೆಪಿ ಹಿರಿಯರ ಮಾಸ್ಟರ್ ಪ್ಲಾನ್ ಸಕ್ಸಸ್: ಜಿದ್ದಾಜಿದ್ದಿನ ಕಣದಲ್ಲಿ ಚನ್ನಪ್ಪ ಮಳಗಿಗೆ "ಪಟ್ಟ", ನಾರಾಯಣಪ್ಪ ನಾಯಕ 'ತ್ಯಾಗ'!

ತುಂಗಾವಾಣಿ.
ಗಂಗಾವತಿ: ಕಳೆದ ಎರಡು ವರ್ಷಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಇಲ್ಲಿನ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಕೊನೆಗೂ ತೆರೆ ಬಿದ್ದಿದೆ. ಬಿಜೆಪಿ ಹಿರಿಯ ಮುಖಂಡರ ಯಶಸ್ವಿ ಸಂಧಾನದ ಫಲವಾಗಿ ಅಧ್ಯಕ್ಷರಾಗಿ ನ್ಯಾಯವಾದಿ ಚನ್ನಪ್ಪ ಮಳಗಿ ಹಾಗೂ ಉಪಾಧ್ಯಕ್ಷರಾಗಿ ಕನಕಪ್ಪ ಮರಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಲ್ಕು ಬಾರಿ ವಿಫಲವಾಗಿದ್ದ ಪ್ರಕ್ರಿಯೆ:
ಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನಕ್ಕೆ ಕಳೆದ ಒಂದೂವರೆ ವರ್ಷದಿಂದ ಚುನಾವಣೆ ನಿಗದಿಯಾಗುತ್ತಾ, ಕಾರಣಾಂತರಗಳಿಂದ ನಾಲ್ಕು ಬಾರಿ ಮುಂದೂಡಲ್ಪಡುತ್ತಲೇ ಬಂದಿತ್ತು. ಇಂದು (ಬುಧವಾರ, ಜೂನ್ 3) ಐದನೇ ಬಾರಿಗೆ ಚುನಾವಣೆ ನಿಗದಿಯಾಗಿತ್ತು. 15 ಸದಸ್ಯ ಬಲದ ಆಡಳಿತ ಮಂಡಳಿಯಲ್ಲಿ ಒಬ್ಬ ಸದಸ್ಯರ ನಿಧನ ಹಾಗೂ ಇಬ್ಬರ ಅನರ್ಹತೆಯಿಂದಾಗಿ ಸಂಖ್ಯಾಬಲ 12ಕ್ಕೆ ಇಳಿದಿತ್ತು. ಈ 12 ಸದಸ್ಯರು ಎರಡು ಬಣಗಳಲ್ಲಿ ತಲಾ ಆರು ಜನರಂತೆ ಹಂಚಿ ಹೋಗಿದ್ದರಿಂದ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಕಳೆದ 2025ರ ಜುಲೈ 19 ರಂದು ನಡೆದಿದ್ದ ಪ್ರಕ್ರಿಯೆಯಲ್ಲಿ ನಾಮಪತ್ರ ಸಲ್ಲಿಕೆಯಾದ ನಂತರ ಸದಸ್ಯರ ಗೈರುಹಾಜರಿಯಿಂದಾಗಿ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಅಂದು ಅಧ್ಯಕ್ಷ ಸ್ಥಾನಕ್ಕೆ ಜೋಗದ ನಾರಾಯಣಪ್ಪ ನಾಯಕ ಮತ್ತು ಚನ್ನಪ್ಪ ಮಳಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜ ಈ. ಮತ್ತು ಕನಕಪ್ಪ ಅವರು ನಾಮಪತ್ರ ಸಲ್ಲಿಸಿದ್ದರು. ಇಂದು ಚುನಾವಣಾ ಪ್ರಕ್ರಿಯೆ ಎಲ್ಲಿಗೆ ನಿಂತಿತ್ತೋ (ನಾಮಪತ್ರ ಪರಿಶೀಲನೆ ಹಂತ) ಅಲ್ಲಿಂದಲೇ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದರು.

ಸಂಧಾನದ ಸೂತ್ರ:
ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪರಿಸ್ಥಿತಿ ಬಿಗಡಾಯಿಸುವುದನ್ನು ಅರಿತ ಬಿಜೆಪಿ ಹಿರಿಯ ಮುಖಂಡರು ರಂಗಪ್ರವೇಶ ಮಾಡಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಕಚೇರಿಯಲ್ಲಿ ಮಾಜಿ ಸಂಸದ ಶಿವರಾಮಗೌಡ ಹಾಗೂ ಮಾಜಿ ಶಾಸಕ ಜಿ. ವೀರಪ್ಪ ಅವರು ಆಕಾಂಕ್ಷಿಗಳಾದ ಚನ್ನಪ್ಪ ಮಳಗಿ ಮತ್ತು ನಾರಾಯಣಪ್ಪ ನಾಯಕ ಸೇರಿದಂತೆ ಎಲ್ಲಾ ನಿರ್ದೇಶಕರೊಂದಿಗೆ ಮಹತ್ವದ ಸಭೆ ನಡೆಸಿದರು.
ಹಿರಿಯರ ಸೂಚನೆ ಹಾಗೂ ಪಕ್ಷದ ಹಿತದೃಷ್ಟಿಯಿಂದ ಜೋಗದ ನಾರಾಯಣಪ್ಪ ನಾಯಕ ಅವರು ತಮ್ಮ ಪಟ್ಟು ಸಡಿಲಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷೆಯಿಂದ ಹಿಂದೆ ಸರಿದರು. ನಾರಾಯಣಪ್ಪ ನಾಯಕ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಗರಾಜ ಈ. ಅವರು ತಮ್ಮ ನಾಮಪತ್ರಗಳನ್ನು ಹಿಂಪಡೆದರು. ಈ 'ತ್ಯಾಗ'ದ ರಾಜಕಾರಣದಿಂದಾಗಿ ಚನ್ನಪ್ಪ ಮಳಗಿ ಮತ್ತು ಕನಕಪ್ಪ ಮರಿಯಪ್ಪ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಚಂದ್ರಶೇಖರ್ ಅಧಿಕೃತವಾಗಿ ಘೋಷಿಸಿದರು.

ಸಹಕಾರ ಕಾಯ್ದೆಯ ಭೀತಿ:
ಒಂದೊಮ್ಮೆ ಸಂಧಾನ ಯಶಸ್ವಿಯಾಗದಿದ್ದರೆ, ಸದಸ್ಯತ್ವ ರದ್ದಾಗುವ ಭೀತಿಯೂ ಇತ್ತು. ಸಹಕಾರ ಇಲಾಖೆಯ 1959ರ ಕಾಯ್ದೆ 29.ಸಿ ನಿಯಮದಂತೆ ಸತತ ಮೂರು ಸಭೆಗಳಿಗೆ ಗೈರುಹಾಜರಾಗುವ ನಿರ್ದೇಶಕರ ಸದಸ್ಯತ್ವ ರದ್ದು ಮಾಡುವ ಅಧಿಕಾರ ಚುನಾವಣಾಧಿಕಾರಿಗೆ ಇತ್ತು. ಇದು ಕೂಡ ಸದಸ್ಯರನ್ನು ಒಮ್ಮತದ ನಿರ್ಧಾರಕ್ಕೆ ಬರಲು ಪ್ರೇರೇಪಿಸಿತು ಎನ್ನಲಾಗಿದೆ.
ಆಯ್ಕೆಯ ನಂತರ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಎಲ್ಲಾ ನಿರ್ದೇಶಕರು ಹಾಗೂ ಹಿರಿಯ ಮುಖಂಡರು ಅಭಿನಂದಿಸಿದರು. ಈ ಮೂಲಕ ಹಲವು ದಿನಗಳ ಗೊಂದಲದ ಗೂಡಾಗಿದ್ದ ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ಸುಭದ್ರ ನಾಯಕತ್ವ ದೊರೆತಂತಾಗಿದೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize