Tunganews

ಕೊಪ್ಪಳ: ಅಸಭ್ಯ 'ಖಾಕಿ'ಗೆ ಎತ್ತಂಗಡಿ ಪಾರ್ಸೆಲ್: ಬಾಯಿಗೆ ಬೀಗ ಹಾಕದ ಅಧಿಕಾರಿಗೆ ಸಿಕ್ಕಿತು ಡಿ ಸಿ ಆರ್ ಬಿ ಗಿಫ್ಟ್!

ಕೊಪ್ಪಳ: ಅಸಭ್ಯ 'ಖಾಕಿ'ಗೆ ಎತ್ತಂಗಡಿ ಪಾರ್ಸೆಲ್:   ಬಾಯಿಗೆ ಬೀಗ ಹಾಕದ ಅಧಿಕಾರಿಗೆ ಸಿಕ್ಕಿತು ಡಿ ಸಿ ಆರ್ ಬಿ ಗಿಫ್ಟ್!

​ತುಂಗಾವಾಣಿ.
​ಅಧಿಕಾರದ ಮದ ನೆತ್ತಿಗೇರಿದಾಗ ಭಾಷೆಯ ಮೇಲಿನ ಹತೋಟಿ ತಪ್ಪುವುದು ಕೆಲವರಿಗೆ ರೂಢಿ. ಆದರೆ, ಖಾಕಿ ವಸ್ತ್ರದೊಳಗೆ ನಿಂತು, ಅನ್ನ ನೀಡುವ ರೈತ ಸಮುದಾಯದ ಮೇಲೆಯೇ ಬಾಯಿಗೆ ಬಂದಂತೆ ಅಸಭ್ಯತೆಯ 'ಪವರ್' ಪ್ರದರ್ಶಿಸಲು ಹೊರಟರೆ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಜ್ವಲಂತ ಉದಾಹರಣೆ!

​ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿಯಲ್ಲಿ ಬೇವೂರು ಠಾಣೆಯ ಪಿಎಸ್‌ಐ ಗುರುರಾಜ್ ತೋರಿದ್ದರೆನ್ನಲಾದ 'ಖಾಕಿ ದರ್ಪ'ದ ಸೌಂಡ್ ಹಾಗೂ ವಿಡಿಯೋ ಕ್ಲಿಪ್ಪಿಂಗ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಕೊಪ್ಪಳ ಪೊಲೀಸ್ ಇಲಾಖೆಯನ್ನೇ ಮುಜುಗರದ ತುದಿಯಲ್ಲಿ ನಿಲ್ಲಿಸಿತ್ತು. 'ಕಾನೂನು ರಕ್ಷಕ' ಸ್ಥಾನದಲ್ಲಿದ್ದುಕೊಂಡು ಪ್ರದರ್ಶಿಸಿದ ಈ 'ವೀರಾವೇಶ'ಕ್ಕೆ ಅಂತಿಮವಾಗಿ ಇಲಾಖೆಯ ಉನ್ನತಾಧಿಕಾರಿಗಳು ಕತ್ತರಿ ಹಾಕಿದ್ದಾರೆ.

​ಕುಕನೂರಿನಿಂದ ಬೇವೂರಿಗೆ... ಬೇವೂರಿನಿಂದ ಡಿಸಿಆರ್‌ಬಿಗೆ!
​ಈ ಪಿಎಸ್‌ಐ ಸಾಹೇಬ್ರ 'ಹಿನ್ನೆಲೆ'ಯನ್ನು ಒಮ್ಮೆ ತಿರುವಿ ನೋಡಿದರೆ ಇವರ ಶೈಲಿ ಎಂತಹುದೆಂಬುದು ಅರ್ಥವಾಗುತ್ತದೆ. ಈ ಹಿಂದೆ ಕುಕನೂರು ಠಾಣೆಯಲ್ಲಿದ್ದಾಗ ದಲಿತ ಮುಖಂಡರ ಮೇಲಿನ ಹಲ್ಲೆ ಮತ್ತು ಅವಾಚ್ಯ ಶಬ್ದಗಳ ನಿಂದನೆಯ ಗಂಭೀರ ಆರೋಪದಡಿ ಇಲಾಖಾ ತನಿಖೆ ಎದುರಿಸಿ ಅಮಾನತಾಗಿದ್ದರು. ಅದಾಗಿ ಇತ್ತೀಚೆಗಷ್ಟೇ ಬೇವೂರು ಠಾಣೆಗೆ ವರ್ಗಾವಣೆಯಾಗಿ ಬಂದಿದ್ದರು. ಆದರೆ, ಜಾಗ ಬದಲಾಯಿತೇ ವಿನಃ ಮಾತು-ವರ್ತನೆ ಬದಲಾಗಲಿಲ್ಲ ಎನ್ನುವುದಕ್ಕೆ ಮೊನ್ನೆ ಕುದರಿಮೋತಿ ಗ್ರಾಮದಲ್ಲಿ ನಡೆದ ವಾಗ್ವಾದವೇ ಸಾಕ್ಷಿ!
​ಸಿಸಿ ರಸ್ತೆ ಕಾಮಗಾರಿ ವಿವಾದದ ಸ್ಥಳಕ್ಕೆ ಕಾನೂನು ಸುವ್ಯವಸ್ಥೆ ಕಾಯಲು ತೆರಳಿದ್ದ ಅಧಿಕಾರಿ, ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು, ಅಲ್ಲಿ ಪ್ರದರ್ಶಿಸಿದ 'ಶಬ್ದ ಭಂಡಾರ' ಜಿಲ್ಲೆಯ ಜನತೆಗೆ ಮತ್ತು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋ ವೈರಲ್ ಆಗಿ ಪೊಲೀಸ್ ಇಲಾಖೆಯ ವರ್ಚಸ್ಸಿಗೆ ಕಪ್ಪುಚುಕ್ಕೆ ತಗಲುತ್ತಿದ್ದಂತೆ, ಬಳ್ಳಾರಿ ವಲಯದ ಐಜಿಪಿ ಡಾ. ಪಿ.ಎಸ್. ಹರ್ಷ (ಐಪಿಎಸ್) ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

​ಆಡಳಿತಾತ್ಮಕ ವರ್ಗಾವಣೆಯ 'ವಿಶೇಷ ಗಿಫ್ಟ್'!
​ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರ (ಎಸ್​ಪಿ) ವರದಿಯನ್ನಾಧರಿಸಿ, ಐಜಿಪಿ ಡಾ. ಪಿ.ಎಸ್. ಹರ್ಷ ಅವರು 2026ರ ಜುಲೈ 21ರಂದು (ಆದೇಶ ಸಂ: 172/ಸಿಬ್ಬಂದಿ-5/ಡಿಇ&ಪಿಆರ್/ಪ್ರಾ.ವಿ/2026) ಹೊಸ ಆದೇಶ ಹೊರಡಿಸಿದ್ದಾರೆ. ಬೇವೂರು ಠಾಣೆಯಲ್ಲಿದ್ದ ಪಿಎಸ್‌ಐ ಗುರುರಾಜ್ ಅವರನ್ನು ಯಾವುದೇ ಸೇರುವಿಕೆ ಕಾಲಾವಕಾಶ ನೀಡದೆ (Joining Time), ತಕ್ಷಣವೇ ಜಾರಿಗೆ ಬರುವಂತೆ ಕೊಪ್ಪಳದ ಡಿ ಸಿ ಆರ್ ಬಿ (DCRB) ವಿಭಾಗಕ್ಕೆ 'ಆಡಳಿತಾತ್ಮಕ ಹಿತದೃಷ್ಟಿಯಿಂದ' ಎತ್ತಂಗಡಿ ಮಾಡಿದ್ದಾರೆ!
​
"ಪೊಲೀಸ್ ಇಲಾಖೆಯಲ್ಲಿ ಜನಸಾಮಾನ್ಯರೊಂದಿಗೆ ಹೇಗೆ ಸಂಭಾಷಿಸಬೇಕು ಎಂಬುದಕ್ಕೆ ವಿಶೇಷ ತರಬೇತಿ ಅಗತ್ಯವಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಸಂಯಮ ಕಳೆದುಕೊಳ್ಳುವ ಅಧಿಕಾರಿಗಳಿಗೆ 'ಜನಮೈತ್ರಿ ಪಾಲನೆ'ಯ ಪಾಠವಂತೂ ಖಂಡಿತ ಬೇಕಿದೆ" ಎಂಬ ಮಾತುಗಳು ಯಲಬುರ್ಗಾ ಮತ್ತು ಕೊಪ್ಪಳ ಭಾಗ ಸೇರಿದಂತೆ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.
​ವರದಿಗಳ ಪ್ರಕಾರ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದವರ ಮೇಲೆ ಕಾನೂನು ಪ್ರಕಾರ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಅದನ್ನು ಬಿಟ್ಟು ಅಧಿಕಾರದ ಬಲದಿಂದ ಮಾತು ಮೀರಿದರೆ ಇಲಾಖೆಯ ನಿಷ್ಠಾವಂತ ಅಧಿಕಾರಿಗಳ ತಲೆಯೂ ತಗ್ಗಿಸುವಂತೆ ಆಗುತ್ತದೆ ಎಂಬುದಕ್ಕೆ ಈ ವರ್ಗಾವಣೆ ಆದೇಶವೇ ಸಾಕ್ಷಿ. ಮುಂದಾದರೂ ಈ 'ವರ್ಗಾವಣೆ ಪಾಠ'ದಿಂದ ಶಿಸ್ತು ಮೂಡುತ್ತದೆಯೇ ಎಂದು ಕಾದು ನೋಡಬೇಕಿದೆ!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize