Tunganews

ಗಂಗಾವತಿ: ಖಾಸಗಿ ಶಾಲಾ ಮುಖ್ಯಸ್ಥನ ತೇಜೋವಧೆಗೆ ಸಂಚು: 'ರ‍್ಯಾಪರ್' ಫೋಟೋ ಬಂಡವಾಳ, ಸಾಮಾಜಿಕ ಜಾಲತಾಣಗಳಲ್ಲಿ ಶಾಹೀನಾ ಕೌಸರ್ ಹೈಡ್ರಾಮಾ!?

Jul 23, 2026, 11:19 AM IST
ಗಂಗಾವತಿ: ಖಾಸಗಿ ಶಾಲಾ ಮುಖ್ಯಸ್ಥನ ತೇಜೋವಧೆಗೆ ಸಂಚು: 'ರ‍್ಯಾಪರ್' ಫೋಟೋ ಬಂಡವಾಳ, ಸಾಮಾಜಿಕ ಜಾಲತಾಣಗಳಲ್ಲಿ ಶಾಹೀನಾ ಕೌಸರ್ ಹೈಡ್ರಾಮಾ!?

ತುಂಗಾವಾಣಿ.
ಗಂಗಾವತಿ: ಸಹೋದ್ಯೋಗಿ ಸಂಸ್ಥೆಯ ನೆರವು ಕೋರಿ ಬಂದ ಖಾಸಗಿ ಶಾಲೆಯೊಂದರ ಮುಖ್ಯಸ್ಥರ ಮೇಲೆ ‘ಮಾಹಿತಿ ಕಳ್ಳತನ’ದ ಸುಳ್ಳು ಆರೋಪ ಹೊರಿಸಿ, ಅವರ ಆತ್ಮಗೌರವಕ್ಕೆ ಧಕ್ಕೆ ತಂದಿರುವ ರೋಚಕ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸರಕಾರದಿಂದ ಸಿಗಬೇಕಾದ ಪಠ್ಯಪುಸ್ತಕಗಳು ಸಕಾಲಕ್ಕೆ ತಲುಪದ ಹಿನ್ನೆಲೆಯಲ್ಲಿ, ತಮ್ಮ ಶಾಲೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೆರವು ಯಾಚಿಸಲು ರಾಘವೇಂದ್ರ ಪಬ್ಲಿಕ್ ಸ್ಕೂಲ್ ಮುಖ್ಯಸ್ಥ ಪವನ್ ಕುಮಾರ್ ಅವರು ನಗರದ ಹುಮಾ ಖಾಸಗಿ ಶಾಲೆಗೆ ತೆರಳಿದ್ದರು. ಈ ವೇಳೆ ನಡೆದ ಸಣ್ಣ ಘಟನೆಯೊಂದನ್ನು ಬಂಡವಾಳ ಮಾಡಿಕೊಂಡ ಹುಮಾ ಶಾಲೆಯ ಮುಖ್ಯಸ್ಥೆ ಶಾಹೀನಾ ಕೌಸರ್, ಪವನ್ ಕುಮಾರ್ ಅವರ ತೇಜೋವಧೆಗೆ ಇಳಿದಿದ್ದಾರೆ ಎನ್ನಲಾಗಿದೆ, ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಡೆದಿದ್ದೇನು?
ಸಹಾಯದ ಭರವಸೆ ನೀಡಿ ಕರೆಸಿಕೊಂಡಿದ್ದ ಹುಮಾ ಶಾಲೆಯ ಮುಖ್ಯಸ್ಥೆ ಶಾಹೀನಾ ಕೌಸರ್, ತರಗತಿಗೆ ತೆರಳಿದ್ದಾಗ ಆಡಳಿತಾಧಿಕಾರಿ ಕಚೇರಿಯಲ್ಲಿ ಕಾಯುತ್ತಿದ್ದ ಪವನ್ ಕುಮಾರ್ ಅವರ ಕಣ್ಣಿಗೆ ಮೇಜಿನ ಮೇಲಿದ್ದ ರ‍್ಯಾಪರ್ (ಪುಸ್ತಕದ ರಕ್ಷಣಾ ಕವಚ) ಡಿಸೈನ್ ಬಿದ್ದಿದೆ. "ನಮ್ಮ ಶಾಲೆಯಲ್ಲೂ ಇಂತಹ ವಿನ್ಯಾಸ ಬಳಸಬಹುದು" ಎಂಬ ಕುತೂಹಲದಿಂದ, ಅಲ್ಲೇ ಇದ್ದ ಆ ಶಾಲೆಯ ಸಿಬ್ಬಂದಿ ಸಹ ಇದ್ದರು, ಸಿಸಿಟಿವಿ ಕ್ಯಾಮೆರಾ ಕಣ್ಣೆದುರೇ ಅದರ ಐದಾರು ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು.
ನಂತರ ಬಂದ ಶಾಹೀನಾ ಕೌಸರ್ ಅವರೊಂದಿಗೆ ಸುಮಾರು ಒಂದು ಗಂಟೆ ಕಾಲ ಸೌಹಾರ್ದಯುತವಾಗಿ ಚರ್ಚಿಸಿ " ಅಯ್ಯೋ ಇದೇನು ಮಹಾ ಗೌಪ್ಯ ವಿಷಯವೇ? ಅಂದು ಕೊಂಡು, ಪೋಟೊ ಕ್ಲಿಕ್‌ಸಿಕೊಂಡಿದ್ದ ವಿಷಯ ಹೇಳದೆ ನಿರ್ಗಮಿಸಿದ್ದರು. ಆ ಫೋಟೋಗಳಲ್ಲಿ ಯಾವುದೇ ಗೌಪ್ಯ ಮಾಹಿತಿಯೂ ಇರಲಿಲ್ಲ, ಕಳ್ಳತನದ ದುರುದ್ದೇಶವೂ ಇರಲಿಲ್ಲ.

ಸಹಾಯದ ನೆಪದಲ್ಲಿ ತೇಜೋವಧೆ!
ಆದರೆ, ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಹುಮಾ ಶಾಲೆಯ ಮುಖ್ಯಸ್ಥೆ ಶಾಹೀನಾ ಕೌಸರ್, ವಿಷಯವನ್ನು ಗಂಭೀರವಾಗಿ ಪರಿಗಣಿಸುವ ನೆಪದಲ್ಲಿ ಪತ್ರಿಕೆಗಳಿಗೆ ಜಾಗರೂಕರಾಗಿ ಮಸಾಲೆ ಸುದ್ದಿ ಸರಬರಾಜು ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ರಾಘವೇಂದ್ರ ಪಬ್ಲಿಕ್ ಸ್ಕೂಲ್ ಮುಖ್ಯಸ್ಥ ಪವನ್ ಕುಮಾರ್ ವಿರುದ್ಧ ಅಪಪ್ರಚಾರ ಆರಂಭಿಸಿದ್ದರು.
ವಿಷಯ ವಿಕೋಪಕ್ಕೆ ಹೋಗುವುದು ಬೇಡ ಎಂಬ ಉದ್ದೇಶದಿಂದ ಹಾಗೂ ಶಿಕ್ಷಣ ಕ್ಷೇತ್ರದ ಗೌರವಕ್ಕೆ ಧಕ್ಕೆಯಾಗಬಾರದೆಂದು ಪವನ್ ಕುಮಾರ್ ಅವರು, ನೇರವಾಗಿ ಶಾಹೀನ್ ಕೌಸರ್ ಅವರ ಶಾಲೆಗೆ ಬಂದು, ತಮಗಾದ ಅಜಾಗರೂಕತೆಗೆ ಕ್ಷಮೆ ಯಾಚಿಸಿದ್ದರು. ಆದರೆ, ಈ ಕ್ಷಮಾಪಣೆ ವೀಡಿಯೋ ಮತ್ತು ಪತ್ರವನ್ನೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ಕೃತ್ಯಕ್ಕೆ ಶಾಹೀನಾ ಕೌಸರ್ ಮುಂದಾಗಿದ್ದಾರೆ ಎನ್ನಲಾಗಿದೆ.!

‘ಮಕ್ಕಳ ಭವಿಷ್ಯಕ್ಕಾಗಿ ನೆರವು ಕೇಳಲು ಹೋದರೆ, ಹುಮಾ ಶಾಲೆಯ ಆಡಳಿತ ಮಂಡಳಿ ಈ ಹಂತದ ತೇಜೋವಧೆ ಮಾಡುತ್ತದೆ ಎಂದು ಊಹಿಸಿರಲಿಲ್ಲ. ಫೋಟೋ ತೆಗೆದಿದ್ದು ನಿಜ, ಆದರೆ ಅದರಲ್ಲಿ ಯಾವುದೇ ಗೌಪ್ಯ ಮಾಹಿತಿ ಇರಲಿಲ್ಲ. ಕ್ಷಮೆ ಕೇಳಿದ ಮೇಲೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಾಕಿ ಪ್ರಚಾರ ಪಡೆಯುತ್ತಿರುವುದು ಅಕ್ಷಮ್ಯ.’

– ಪವನ್ ಕುಮಾರ್, ಮುಖ್ಯಸ್ಥರು, ರಾಘವೇಂದ್ರ ಪಬ್ಲಿಕ್ ಸ್ಕೂಲ್

ಸಾರ್ವಜನಿಕ ವಲಯದಲ್ಲಿ ಆಕ್ರೋಶ!
ಶಿಕ್ಷಣ ಸಂಸ್ಥೆಯನ್ನು ನಡೆಸುವ ಶಾಹೀನಾ ಕೌಸರ್ ಅವರೇ ಒಬ್ಬ ಸಹೋದ್ಯೋಗಿಯ ಸಣ್ಣ ಅಜಾಗರೂಕತೆಯನ್ನು ಬಂಡವಾಳ ಮಾಡಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ 'ಲೈಕ್ಸ್' ಮತ್ತು 'ಶೇರ್‌'ಗಳಿಗಾಗಿ ವ್ಯಕ್ತಿತ್ವ ಹರಣಕ್ಕೆ ಇಳಿದಿರುವುದು ಶಿಕ್ಷಣ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಈ ವಿಚಾರ ಗಂಗಾವತಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize