Tunganews

"ಗಂಗಾವತಿ: ಅನ್ಸಾರಿ ಆರೋಪಕ್ಕೆ, ತಂಗಡಗಿ ತಿರುಗೇಟು: ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ಸಾಕ್ಷಿ ಇದ್ದರೆ ತನ್ನಿ!"

"ಗಂಗಾವತಿ: ಅನ್ಸಾರಿ ಆರೋಪಕ್ಕೆ, ತಂಗಡಗಿ ತಿರುಗೇಟು: ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ಸಾಕ್ಷಿ ಇದ್ದರೆ ತನ್ನಿ!"


ತುಂಗಾವಾಣಿ.
ಗಂಗಾವತಿ: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ಸರಣಿ ಆರೋಪಗಳಿಗೆ ನೂತನ ಸಚಿವ ಶಿವರಾಜ್ ತಂಗಡಗಿ ಅವರು ಗಂಗಾವತಿಯಲ್ಲಿ ಮಾತಿನ ಚಾಟ ಬೀಸಿದ್ದಾರೆ. ಸಚಿವರಾದ ಬಳಿಕ ಪ್ರಥಮ ಬಾರಿಗೆ ಗಂಗಾವತಿಗೆ ಆಗಮಿಸಿದ ಅವರಿಗೆ ಅಭಿಮಾನಿಗಳು ವಿಜೃಂಭಣೆಯ ಸ್ವಾಗತ ಕೋರಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎದುರಾಳಿಗಳ ಆರೋಪಗಳನ್ನು ತೀವ್ರವಾಗಿ ಖಂಡಿಸಿದರು.
ಆಧಾರರಹಿತ ಆರೋಪ ಶೋಭೆಯಲ್ಲ
"ಗಂಗಾವತಿಗೆ ಡಿವೈಎಸ್‌ಪಿ ಹುದ್ದೆ ಪೋಸ್ಟಿಂಗ್‌ಗಾಗಿ ಒಂದೂವರೆ ಕೋಟಿ ರೂಪಾಯಿ ನೀಡಲಾಗಿದೆ ಎಂದು ಗಾಳಿಯಲ್ಲಿ ಗುಂಡು ಹೊಡೆಯುವುದರಲ್ಲಿ ಅರ್ಥವಿಲ್ಲ. ಅಂತಹದ್ದು ಒಂದೇ ಒಂದು ಸಾಕ್ಷಿ ಇದ್ದರೆ ತಂದು ತೋರಿಸಲಿ" ಎಂದು ಸಚಿವ ತಂಗಡಗಿ ಸವಾಲು ಎಸೆದರು.

"ಸಣ್ಣ ಹುಡುಗರಂತೆ ಬಾಲಿಶವಾಗಿ ಮಾತನಾಡುವುದು ಸರಿಯಲ್ಲ. ಸೀನಿಯರ್ ಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇರುವವರು ಜವಾಬ್ದಾರಿಯಿಂದ ಮಾತನಾಡಬೇಕು. ಎಲ್ಲೋ ಕುಳಿತುಕೊಂಡು ಆಡಿಯೋ, ವಿಡಿಯೋ ಮಾಡಿದರೆ ಈ ಕಾಲದಲ್ಲಿ ಯಾರೂ ನಂಬುವುದಿಲ್ಲ. ಜನಪ್ರತಿನಿಧಿಗಳು ಗೆದ್ದ ಮೇಲೆ ಏನು ಕೆಲಸ ಮಾಡಿದ್ದಾರೆ ಮತ್ತು ಜನರ ಮಧ್ಯೆ ಯಾರಿದ್ದಾರೆ ಎಂಬುದನ್ನಷ್ಟೇ ಮತದಾರರು ಗಮನಿಸುತ್ತಾರೆ" ಎಂದು ಹೇಳಿದರು.
ಸೋಲು-ಗೆಲುವು ಜನರ ನಿರ್ಧಾರ
ಸೋಲಿಗೆ ಇತರರನ್ನು ಹೊಣೆ ಮಾಡುವುದನ್ನು ತಳ್ಳಿಹಾಕಿದ ಅವರು, "ನನ್ನಷ್ಟು ಅಭಿವೃದ್ಧಿ ಕೆಲಸ ಮಾಡಿದವರು ಯಾರಿದ್ದಾರೆ? ಆದರೂ ನಾನು ಈ ಹಿಂದೆ ಸೋತಿರಲಿಲ್ಲವೇ? ಆಗ ನಾನು ಇಕ್ಬಾಲ್ ಅನ್ಸಾರಿ, ಬಸವರಾಜ ರಾಯರೆಡ್ಡಿ ಅಥವಾ ರಾಘವೇಂದ್ರ ಹಿಟ್ನಾಳ್ ಅವರ ಹೆಸರು ಹೇಳಿ ದೂರಿದ್ದೇನಾ? ಸೋಲು ಮತ್ತು ಗೆಲುವು ಎಂಬುದು ಪ್ರಜಾಪ್ರಭುತ್ವದಲ್ಲಿ ಜನರ ನಿರ್ಧಾರವೇ ಹೊರತು ವ್ಯಕ್ತಿಗಳದ್ದಲ್ಲ" ಎಂದರು

 "ನಮ್ಮ ಮಾತು ಕೇಳಿ ಜನ ಓಟ್ ಹಾಕುವುದಿಲ್ಲ. ಗಂಗಾವತಿಯ ಮತದಾರರು ಅತ್ಯಂತ ಪ್ರಜ್ಞಾವಂತರು. ಮತ್ತೊಬ್ಬರನ್ನು ಸೋಲಿಸುವ ಅಥವಾ ಗೆಲ್ಲಿಸುವ ಮಾತಾಡುವ ಮೊದಲು, ತಾವು ಗೆಲ್ಲುವುದನ್ನು ನೋಡಿಕೊಳ್ಳಲಿ. ಸೋತಾಗ ನಾನು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ, ಜನರ ಮಧ್ಯೆ ಹೋಗಿ ಹೋರಾಟ ನಡೆಸಿ 43 ಸಾವಿರ ಮತಗಳ ಅಂತರದಿಂದ ಗೆದ್ದು ಬಂದಿದ್ದೇನೆ."

ಎಲ್ಲ ಸಮುದಾಯದವರ ಬೆಂಬಲವಿದೆ
ತಮ್ಮ ರಾಜಕೀಯ ಅನುಭವವನ್ನು ನೆನಪಿಸಿಕೊಂಡ ಸಚಿವರು, "ನಾನು ಅಂಬ್ರೇಗೌಡರ ಮನೆಗೆ ಹೋದಾಗ ಅವರೇ ಮೇಲಿಂದ ಕೆಳಗೆ ಬರಲಿಲ್ಲ. ನಮಗೇ ಈ ಪರಿಸ್ಥಿತಿಯಾದರೆ ಸಾಮಾನ್ಯ ಮತದಾರರ ಕಥೆ ಏನು? ನನಗೆ ಯಾವುದೇ ಒಂದು ನಿರ್ದಿಷ್ಟ ಸಮುದಾಯ ಮತ ಹಾಕಿಲ್ಲ, ಕ್ಷೇತ್ರದ ಎಲ್ಲಾ ಸಮುದಾಯದ ಜನರೂ ಆಶೀರ್ವದಿಸಿದ್ದಾರೆ. ಮತದಾರರ ತೀರ್ಪಿಗೆ ಎಲ್ಲರೂ ತಲೆಬಾಗಬೇಕು" ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಇಕ್ಬಾಲ್ ಅನ್ಸಾರಿ, ತಮ್ಮ ಸೋಲಿಗೆ ತಂಗಡಗಿ, ರಾಯರೆಡ್ಡಿ ಮತ್ತು ಹಿಟ್ನಾಳ್ ಕಾರಣ ಎಂದು ಬಹಿರಂಗ ಆರೋಪ ಮಾಡಿದ್ದರು. ಅದಕ್ಕೆ ಗಂಗಾವತಿ ಮಣ್ಣಿನಲ್ಲೇ ನಿಂತು ತಂಗಡಗಿ ನೀಡಿದ ಈ ತಿರುಗೇಟು, ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಇದಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರು ಯಾವ ತರ ಉತ್ತರಿಸುತ್ತಾರೆ ಕಾದು ನೋಡಬೇಕಿದೆ!?

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize