Tunganews

ಗಂಗಾವತಿ:ದಂಡ ವಸೂಲಿಗೇ ಸೀಮಿತವಾಗಿದ್ದ ‘ಸಾಹೇಬ್ರಿಗೆ’ ಗೇಟ್‌ಪಾಸ್: ಗಂಗಾವತಿ ಸಂಚಾರ ಠಾಣೆಗೆ ಶಾರದಮ್ಮ ಸಾರಥ್ಯ!

Sep 14, 2026, 10:32 AM IST
ಗಂಗಾವತಿ:ದಂಡ ವಸೂಲಿಗೇ ಸೀಮಿತವಾಗಿದ್ದ ‘ಸಾಹೇಬ್ರಿಗೆ’ ಗೇಟ್‌ಪಾಸ್: ಗಂಗಾವತಿ ಸಂಚಾರ ಠಾಣೆಗೆ ಶಾರದಮ್ಮ ಸಾರಥ್ಯ!

ಟ್ರಾಫಿಕ್ ಕಂಟ್ರೋಲ್‌ ಬಿಟ್ಟು ಚಲನ್ ಹರಿಯುವುದರಲ್ಲೇ ನಿರತರಾಗಿದ್ದ ಪಿಎಸ್‌ಐ ಇಸ್ಮಾಯಿಲ್ ಜಾಗ ಬದಲಾವಣೆ

ಹಳ್ಳ ಹಿಡಿದಿದ್ದ ಸಂಚಾರ ವ್ಯವಸ್ಥೆಗೆ ಕಾಯಕಲ್ಪ ನೀಡಲು ಮುಂದಾದ ಮಹಿಳಾ ಅಧಿಕಾರಿ

ತುಂಗಾವಾಣಿ.
ಗಂಗಾವತಿ: ಕಳೆದ ಹಲವು ತಿಂಗಳುಗಳಿಂದ ‘ಸಂಚಾರ ನಿಯಂತ್ರಣ’ಕ್ಕಿಂತ ಹೆಚ್ಚಾಗಿ ‘ಖಜಾನೆ ತುಂಬಿಸುವ’ ಕಾರ್ಯದಲ್ಲೇ ಮುಳುಗಿದ್ದ ನಗರದ ಸಂಚಾರ ಠಾಣೆಯ ಚುಕ್ಕಾಣಿ ಕೊನೆಗೂ ಬದಲಾಗಿದೆ. ನಗರದ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸುವ ಬದಲು, ಮೂಲೆಯೊಂದರಲ್ಲಿ ನಿಂತು ವಾಹನ ಸವಾರರ ಜೇಬಿಗೆ ಕತ್ತರಿ ಹಾಕುವುದರಲ್ಲೇ ದಿನ ದೂಡುತ್ತಿದ್ದ ಪಿಎಸ್‌ಐ ಪಿ. ಇಸ್ಮಾಯಿಲ್ ಅವರ ಜವಾಬ್ದಾರಿಯನ್ನು ಬದಲಾಯಿಸಲಾಗಿದ್ದು, ಆ ಸ್ಥಾನಕ್ಕೆ ಶಾರದಮ್ಮ ಅವರ ಕೈಗೆ ಸಂಚಾರ ನಿರ್ವಹಣೆಯ ಪ್ರಮುಖ ಹೊಣೆ (ಪಿಎಸ್‌ಐ-1) ಒಲಿದಿದೆ.

ಜನರ ಗೋಳು ಕೇಳೋರಿರಲಿಲ್ಲ:
ಇಸ್ಮಾಯಿಲ್ ಅವರ ಅಧಿಕಾರಾವಧಿಯಲ್ಲಿ ಗಂಗಾವತಿಯ ಸಂಚಾರ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿತ್ತು. ಗಾಂಧಿ ವೃತ್ತ, ಜುಲೈ ನಗರ, ಸಿಬಿಎಸ್ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದಿನನಿತ್ಯ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ನಿಯಂತ್ರಿಸಲು ಯಾವುದೇ ದೃಢ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿತ್ತು. ವಾಹನ ದಟ್ಟಣೆ ನಿವಾರಿಸುವ ಬದಲು, ಸಣ್ಣಪುಟ್ಟ ಕಾರಣಗಳಿಗೂ ದುಬಾರಿ ದಂಡ ವಿಧಿಸುವುದರಲ್ಲೇ ಅಧಿಕಾರಿ ಮಗ್ನರಾಗಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ‘ಟ್ರಾಫಿಕ್ ಸುಗಮಗೊಳಿಸುವುದು ಇವರ ಕೆಲಸವೋ ಅಥವಾ ಟಾರ್ಗೆಟ್ ಮುಗಿಸುವುದೋ?’ ಎಂದು ಸವಾರರು ಹಿಡಿಶಾಪ ಹಾಕುವಂತಾಗಿತ್ತು.

ಶಾರದಮ್ಮ ಮೇಲಿದೆ ದೊಡ್ಡ ನಿರೀಕ್ಷೆ:
ಈ ಎಲ್ಲ ಅವ್ಯವಸ್ಥೆಗಳ ನಡುವೆ, ಗಂಗಾವತಿ ಸಂಚಾರ ಠಾಣೆಯ ಪಿಎಸ್‌ಐ-2 ಆಗಿದ್ದ ಶಾರದಮ್ಮ ಅವರನ್ನು ಇದೀಗ ಬಳ್ಳಾರಿ ವಲಯ ಐಜಿಪಿ ಡಾ. ಪಿ.ಎಸ್. ಹರ್ಷ ಅವರ ಆದೇಶದಂತೆ ಪ್ರಮುಖ ಹುದ್ದೆಯಾದ ಪಿಎಸ್‌ಐ-1ಗೆ ನಿಯೋಜಿಸಲಾಗಿದೆ. ತಮ್ಮ ಶಿಸ್ತು ಹಾಗೂ ಪ್ರಾಮಾಣಿಕ ಸೇವೆಗೆ ಹೆಸರಾಗಿರುವ ಶಾರದಮ್ಮ ಅವರು ಅಧಿಕಾರ ವಹಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿಸಿದೆ.

ಗಣೇಶೋತ್ಸವದ ದೊಡ್ಡ ಸವಾಲು:
ಮುಂಬರುವ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಸುಗಮ ಸಂಚಾರ ಕಲ್ಪಿಸುವುದು, ಅನಗತ್ಯ ಪಾರ್ಕಿಂಗ್ ತಡೆಗಟ್ಟುವುದು ಹಾಗೂ ಜಾಮ್ ಮುಕ್ತ ರಸ್ತೆಗಳನ್ನು ನಿರ್ಮಿಸುವುದು ನೂತನ ಸಾರಥಿ ಶಾರದಮ್ಮ ಅವರ ಮುಂದಿರುವ ಪ್ರಮುಖ ಸವಾಲಾಗಿದೆ. ಯಾವುದೇ ಜಾಯಿನ್ನಿಂಗ್ ಟೈಮ್ ಪಡೆಯದೆ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಲಾಗಿದ್ದು, ಹಳ್ಳ ಹಿಡಿದಿದ್ದ ಗಂಗಾವತಿ ಸಂಚಾರ ವ್ಯವಸ್ಥೆಯನ್ನು ಶಾರದಮ್ಮ ಅವರು ಹೇಗೆ ಸರಿದಾರಿಗೆ ತರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize