Tunganews

ಲೋಕಾ ದಾಳಿ ಬೆನ್ನಲ್ಲೇ ಗಂಗಾವತಿ ತಹಶೀಲ್ದಾರ್ ವಸಂತಕುಮಾರಿ ‘ರಜೆ’ ರಹಸ್ಯ! ಅಸಲಿಗೆ ನಡೆದಿದ್ದು ಏನು?

Oct 08, 2026, 01:41 PM IST
ಲೋಕಾ ದಾಳಿ ಬೆನ್ನಲ್ಲೇ ಗಂಗಾವತಿ ತಹಶೀಲ್ದಾರ್ ವಸಂತಕುಮಾರಿ ‘ರಜೆ’ ರಹಸ್ಯ!  ಅಸಲಿಗೆ ನಡೆದಿದ್ದು ಏನು?

 ₹40 ಸಾವಿರ ಲಂಚದ ಬೇಟೆ; ಬೆನ್ನಲ್ಲೇ ತಾಯಿಯ ಎದೆನೋವಿನ ನೆಪವೊಡ್ಡಿ ಬೆಂಗಳೂರಿಗೆ ಹಾರಿದ್ರಾ ತಹಶೀಲ್ದಾರ್!

ಸಿಕ್ಕಿಬಿದ್ದ ಸಿಬ್ಬಂದಿ ಮೇಡಂ ಹೆಸರು ಬಾಯಿಬಿಟ್ರಾ? ಪಡಸಾಲೆಯಲ್ಲಿ ತೀವ್ರ ಚರ್ಚೆ

‘ಅನಧಿಕೃತ ಪಿಎ’ ಎಫ್‌ಡಿಎ ಶ್ರೀರಾಮ ಜೋಶಿ ಮೊಬೈಲ್ ನಾಟ್‌ರೀಚೆಬಲ್: ನಿಗೂಢ ಮೌನ

ತಹಶೀಲ್ದಾರ್ ಕುರ್ಚಿಗೆ: ಜಿಲ್ಲಾಡಳಿತದ ವಿನಾಯಕ ಗೋಡಬೋಲೆಗೆ ತರಾತುರಿಯಲ್ಲಿ ಪ್ರಭಾರ ಹೊಣೆ

ತುಂಗಾವಾಣಿ.
ಗಂಗಾವತಿ: ಕಚೇರಿಯ ಒಳಗೆ ಲೋಕಾಯುಕ್ತ ಪೊಲೀಸರ ಹೆಜ್ಜೆ ಸದ್ದು ಕೇಳಬಹುದು ಎಂದು ತಾಲೂಕು ಆಡಳಿತದ ಚುಕ್ಕಾಣಿ ಹಿಡಿದಿದ್ದ ಗಂಗಾವತಿ ತಹಶೀಲ್ದಾರ್ ಗ್ರೇಡ್-1 ಯು. ವಸಂತಕುಮಾರಿ ಅವರ ನಡೆ ಈಗ ಇಡೀ ಜಿಲ್ಲೆಯಲ್ಲಿ ತೀವ್ರ ಅನುಮಾನ ಹಾಗೂ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಕಚೇರಿಯ ವ್ಯಾಪ್ತಿಯಲ್ಲೇ ಜಮೀನಿನ ಉತಾರಕ್ಕಾಗಿ ₹40 ಸಾವಿರ ಲಂಚ ಪಡೆಯುತ್ತಿದ್ದ ಗ್ರಾಮ ಆಡಳಿತಾಧಿಕಾರಿ ಮತ್ತು ಗ್ರಾಮ ಸಹಾಯಕ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಕೆಲವೇ ಗಂಟೆಗಳಲ್ಲಿ, ತಹಶೀಲ್ದಾರ್ ವಸಂತಕುಮಾರಿ ದಿಢೀರ್ ರಜೆ ಹಾಕಿ ಬೆಂಗಳೂರು ಸೇರಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.?

ದಾಳಿಯ ಮರುಕ್ಷಣವೇ ‘ಎದೆನೋವು’ ನೆಪ: ತಹಶೀಲ್ದಾರ್ ಬೆಂಗಳೂರು ಜಂಪ್!?

ಅಕ್ಟೋಬರ್ 6ರಂದು ಮಧ್ಯಾಹ್ನ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದ ತಂಡ ದಾಳಿ ನಡೆಸಿ ಸಂಗಾಪುರ ವಿಎ ಸೋಮನಾಥ ಹಾಗೂ ಗ್ರಾಮ ಸಹಾಯಕ ಹನುಮೇಶನನ್ನು ₹40 ಸಾವಿರ ಸಮೇತ ಬಂಧಿಸಿತ್ತು. ಆದರೆ, ಈ ದಾಳಿಯ ಬಿಸಿ ಕಚೇರಿಯ ಮುಖಸ್ಥರಾದ ತಹಶೀಲ್ದಾರ್ ವಸಂತಕುಮಾರಿ ಅವರಿಗೂ ತಟ್ಟಿತೇ ಎಂಬ ಸಂಶಯ ದಟ್ಟವಾಗಿದೆ.
ದಾಳಿ ನಡೆದ ಬೆನ್ನಲ್ಲೇ, "ತಾಯಿಗೆ ಎದೆನೋವು ಕಾಣಿಸಿಕೊಂಡಿದೆ, ತುರ್ತು ಚಿಕಿತ್ಸೆ ಬೇಕಿದೆ" ಎಂಬ ಕಾರಣ ನೀಡಿ ತಹಶೀಲ್ದಾರ್ ವಸಂತಕುಮಾರಿ ಅ.7ರಿಂದ ಅ.13ರವರೆಗೆ ಅರ್ಧ ವೇತನ ರಜೆಯ ಅರ್ಜಿ ಸಲ್ಲಿಸಿ ರಾಜಧಾನಿ ಬೆಂಗಳೂರಿಗೆ ತೆರಳಿದ್ದಾರೆ. ಆದರೆ ಸಾರ್ವಜನಿಕ ವಲಯದಲ್ಲಿ ಮಾತ್ರ, "ಸಿಕ್ಕಿಬಿದ್ದ ಸಿಬ್ಬಂದಿ ತನಿಖೆಯಲ್ಲಿ ಯಾರ ಹೆಸರು ಬಾಯಿಬಿಟ್ಟಿದ್ದಾರೆ? ಲೋಕಾ ಬಿಸಿ ತಮಗೂ ತಟ್ಟಬಹುದೆಂಬ ಭೀತಿಯಿಂದ ತಹಶೀಲ್ದಾರ್ ಬೆಂಗಳೂರಿಗೆ ಜಾರಿಕೊಂಡರೇ?" ಎಂಬ ಗುಸುಗುಸು ತಾಲೂಕು ಪಡಸಾಲೆಯಲ್ಲಿ ವ್ಯಾಪಕವಾಗಿ ಹಬ್ಬಿದೆ.

ಮೇಡಂ ನೆರಳಿನಂತಿದ್ದ ‘ಅನಧಿಕೃತ ಪಿಎ’ ಎಫ್‌ಡಿಎ ಜೋಶಿ ನಾಪತ್ತೆ!

ತಹಶೀಲ್ದಾರ್ ವಸಂತಕುಮಾರಿ ಅವರ ಬೆನ್ನಿಗೇ ಸದಾ ನೆರಳಿನಂತೆ ನಿಲ್ಲುತ್ತಿದ್ದ ಎಫ್‌ಡಿಎ ಶ್ರೀರಾಮ ಜೋಶಿ ಅವರ ನಡೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಚೇರಿಯಲ್ಲಿ ಇನಾಂ ಮತ್ತು ಎಲ್‌ಆರ್‌ಎಂ ವಿಷಯ ನಿರ್ವಾಹಕರಾಗಿದ್ದರೂ, ಇಲಾಖೆಯ ವಲಯದಲ್ಲಿ ‘ಪಿಎ ಟು ಮೇಡಂ’ ಎಂದೇ ಪ್ರಭಾವ ಬೀರಿದ್ದ ಈ ಶ್ರೀರಾಮ ಜೋಶಿ, ಲೋಕಾ ದಾಳಿಯಾದ ಮರುಕ್ಷಣದಿಂದಲೇ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಮೇಡಂ ರಜೆ ಮೇಲೆ ಹೋದ ಬೆನ್ನಲ್ಲೇ ಇವರೂ ಕಣ್ಮರೆಯಾಗಿರುವುದು ತಹಶೀಲ್ದಾರ್ ಹಾಗೂ ಆಪ್ತ ಸಿಬ್ಬಂದಿಯ ನಡುವಿನ ಕೊಂಡಿಯ ಮೇಲೆ ಸಂಶಯದ ಬೆರಳು ಚಾಚುವಂತೆ ಮಾಡಿದೆ.

ತಹಶೀಲ್ದಾರ್ ಕುರ್ಚಿಗೆ ಗೋಡಬೋಲೆ: ಮುಂದುವರಿದ ತನಿಖೆಯ ತೂಗುಗತ್ತ ತಹಶೀಲ್ದಾರ್ ವಸಂತಕುಮಾರಿ ಅವರು ದಿಢೀರ್ ರಜೆ ಮೇಲೆ ತೆರಳಿದ್ದರಿಂದ ಆಡಳಿತಾತ್ಮಕ ಬಿಕ್ಕಟ್ಟು ತಪ್ಪಿಸಲು ಕೊಪ್ಪಳ ಜಿಲ್ಲಾಧಿಕಾರಿಗಳು ತಕ್ಷಣವೇ ಆದೇಶ ಹೊರಡಿಸಿದ್ದು, ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ವಿನಾಯಕ ಗೋಡಬೋಲೆ ಅವರಿಗೆ ಗಂಗಾವತಿ ತಹಶೀಲ್ದಾರ್ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಿದ್ದಾರೆ.

ಸದ್ಯಕ್ಕೆ ₹40 ಸಾವಿರ ಲಂಚ ಪ್ರಕರಣದಲ್ಲಿ ಇಬ್ಬರು ಜೈಲು ಪಾಲಾಗಿದ್ದರೂ, ಲೋಕಾಯುಕ್ತ ತನಿಖೆಯ ಬಿಸಿ ರಜೆ ಮೇಲಿರುವ ತಹಶೀಲ್ದಾರ್ ವಸಂತಕುಮಾರಿ ಮತ್ತು ಎಫ್‌ಡಿಎ ಶ್ರೀರಾಮ್ ಚೋಶಿ ಅವರ ಕಡೆಗೂ ತಿರುಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize