Tunganews

ಗಂಗಾವತಿ: ಸಂಗಮೇಶ ಸುಗ್ರೀವ ವಿರುದ್ಧ ಗುಡುಗಿದ ಡಿ.ಕೆ ಆಗೋಲಿ!

ಗಂಗಾವತಿ: ಸಂಗಮೇಶ ಸುಗ್ರೀವ ವಿರುದ್ಧ ಗುಡುಗಿದ ಡಿ.ಕೆ ಆಗೋಲಿ!

ತುಂಗಾವಾಣಿ:
ಗಂಗಾವತಿ: ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಗಳ ವಿರುದ್ಧ ಕಪಟ ಕಾಳಜಿ ಪ್ರದರ್ಶಿಸುತ್ತಾ, ರೈತರಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ವದಂತಿ ಹಬ್ಬಿಸುತ್ತಿರುವ ಬಿಜೆಪಿ ಮುಖಂಡನೆಂದು ಹೇಳಿಕೊಳ್ಳುವ ಸಂಗಮೇಶನ ವಿರುದ್ಧ ಗಂಗಾವತಿ ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ ಆಗೋಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಚಿಕ್ಕ ಬೊಮ್ಮನಾಳ ಹಾಗೂ ಹಾಸಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಷ್ಟೇ ದಿಢೀರ್ ಪ್ರತ್ಯಕ್ಷನಾಗುವ ಸಂಗಮೇಶ, ಕ್ಷೇತ್ರದ ಒಟ್ಟಾರೆ ವಸ್ತುಸ್ಥಿತಿ ಹಾಗೂ ತಾಂತ್ರಿಕ ಅಂಶಗಳ ಕನಿಷ್ಠ ಜ್ಞಾನವೂ ಇಲ್ಲದೆ "ಕಾಮಗಾರಿಯೇ ಆರಂಭವಾಗಿಲ್ಲ" ಎಂದು ಹಸಿಹಸಿ ಸುಳ್ಳು ಪ್ರಚಾರ ಮಾಡುತ್ತಿದ್ದಾನೆ. ಇಂತಹ ನಕಲಿ ಕಾಳಜಿ, ಫೋಟೋ ಶೋಕಿ ಹಾಗೂ ಸ್ವಾರ್ಥ ರಾಜಕೀಯದ ವಿರುದ್ಧ ಕ್ಷೇತ್ರದ ಜನತೆ ಜಾಗೃತರಾಗಬೇಕು ಎಂದು ಎಚ್ಚರಿಸಿದ್ದಾರೆ.

ಪಕ್ಷದ ಶಿಸ್ತಿಗೆ ತಿಲಾಂಜಲಿ; ಕೇವಲ ಪ್ರಚಾರದ ಗೀಳು!
ಸಂಗಮೇಶನ ಕಾರ್ಯವೈಖರಿ ಕುರಿತು ಗುಡುಗಿರುವ ಡಿ.ಕೆ. ಆಗೋಲಿ "ತಾನು ಬಿಜೆಪಿಯ ಪ್ರಮುಖ ನಾಯಕ ಎಂದು ಫೋಸು ಕೊಡುವ ಈತನಿಗೆ ಪಕ್ಷದ ಕನಿಷ್ಠ ಶಿಸ್ತಿನ ಪರಿವೆಯಿಲ್ಲ. ಕ್ಷೇತ್ರದ ಶಾಸಕರಾಗಲಿ, ಪಕ್ಷದ ಜಿಲ್ಲಾಧ್ಯಕ್ಷರಾಗಲಿ, ತಾಲೂಕು ಮಂಡಲ ಅಧ್ಯಕ್ಷರಾಗಲಿ ಅಥವಾ ಪಕ್ಷದ ಯಾವುದೇ ಪ್ರಮುಖ ಮುಖಂಡರ ಸಂಪರ್ಕದಲ್ಲಾಗಲಿ ಈತ ಇಲ್ಲ. ಪಕ್ಷದ ಯಾವುದೇ ಅಧಿಕೃತ ಸಭೆ-ಸಮಾರಂಭಗಳಲ್ಲೂ ಭಾಗವಹಿಸುವುದಿಲ್ಲ. ಕೇವಲ ಬೆಂಗಳೂರಿಗೆ ಹೋಗಿ ರಾಜ್ಯ ಮುಖಂಡರ ಜೊತೆ ಫೋಟೋ ತೆಗೆಸಿಕೊಂಡು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಷ್ಟೇ ಈತನ ಸಾಧನೆ" ಎಂದು ತೀವ್ರ ವ್ಯಂಗ್ಯವಾಡಿದ್ದಾರೆ.

ರೈತರ ಸಂಕಷ್ಟಕ್ಕೆ ಸ್ಪಂದಿಸಿ ತಾತ್ಕಾಲಿಕ ವಿರಾಮ: ನೈಜ ಸತ್ಯ ಇಲ್ಲಿದೆ!
ಕೆರೆ ತುಂಬಿಸುವ ಯೋಜನೆಯ ನೈಜ ವಾಸ್ತವವನ್ನು ಜನರಿಂದ ಮರೆಮಾಚಿ ರೈತರ ಹಾದಿ ತಪ್ಪಿಸುತ್ತಿರುವ ಕುತಂತ್ರವನ್ನು ಮುಖಂಡರು ಹಾಗೂ ನೀರಾವರಿ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಬಯಲಿಗೆಳೆದಿದ್ದಾರೆ

ರೈತರ ಬೆಳೆ ರಕ್ಷಣೆಗೆ ಆದ್ಯತೆ: ತಾಲೂಕಿನಲ್ಲಿ ಪ್ರಸ್ತುತ ಭೀಕರ ಬರಗಾಲವಿದ್ದು, ಪೈಪ್‌ಲೈನ್ ಹಾದುಹೋಗುವ ಮಾರ್ಗದಲ್ಲಿ ಅನ್ನದಾತರು ಅಲ್ಪಸ್ವಲ್ಪ ಬೆಳೆ ಬೆಳೆದಿದ್ದಾರೆ. ಈಗಲೇ ಜೆಸಿಬಿ, ಹಿಟಾಚಿ ಯಂತ್ರಗಳನ್ನು ಇಳಿಸಿದರೆ ರೈತರ ಬೆಳೆ ಸಂಪೂರ್ಣ ನಾಶವಾಗುತ್ತದೆ. ಹೀಗಾಗಿ ಅನ್ನದಾತರ ಹಿತದೃಷ್ಟಿಯಿಂದ, ಅವರ ಬೆಳೆ ಕಟಾವು ಮುಗಿಯುವವರೆಗೆ ಕಾಮಗಾರಿಗೆ ಮೂರು ತಿಂಗಳ ತಾತ್ಕಾಲಿಕ ವಿರಾಮ ನೀಡಲಾಗಿದೆ.

ನಾಲ್ಕು ವಿಶೇಷ ತಂಡಗಳು: ಬೆಳೆ ಕಟಾವು ಮುಗಿದ ತಕ್ಷಣವೇ ಗುತ್ತಿಗೆದಾರರು 4 ಪ್ರತ್ಯೇಕ ತಂಡಗಳ ಮೂಲಕ ಯುದ್ಧೋಪಾದಿಯಲ್ಲಿ ಕೆಲಸ ಆರಂಭಿಸಲಿದ್ದಾರೆ. ಒಟ್ಟು 28 ಕೆರೆಗಳ ಕಾಮಗಾರಿಯನ್ನು ಮುಂಬರುವ ಜೂನ್ ತಿಂಗಳ ಒಳಗಾಗಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಲಾಗುವುದು. ಈಗಾಗಲೇ ಎರಡು ಕೆರೆಗಳ ಪೈಪ್‌ಲೈನ್‌ ಕೆಲಸ ಮುಗಿದಿದೆ.

₹153 ಕೋಟಿ ವೆಚ್ಚದ ಕೆರೆ ತುಂಬಿಸುವ ಯೋಜನೆ: ಕ್ಷೇತ್ರದ ಅಂತರ್ಜಲ ಮಟ್ಟ ಹೆಚ್ಚಿಸಿ, ಕೃಷಿಗೆ ಜೀವ ತುಂಬಲು 28 ಕೆರೆಗಳನ್ನು ತುಂಬಿಸುವ ಕಾಮಗಾರಿ ಭರದಿಂದ ಸಾಗುತ್ತಿದ್ದು, ಜೂನ್ ವೇಳೆಗೆ ಸಂಪೂರ್ಣ ಮುಕ್ತಾಯಗೊಳ್ಳಲಿದೆ.

₹100 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ: ಶೇಕಡಾ 75ಕ್ಕೂ ಹೆಚ್ಚು ಕಾಮಗಾರಿ ಪೂರ್ಣಗೊಂಡಿದೆ. ಜನರಿಗೆ ಸರಬರಾಜು ಮಾಡುವ ನೀರು ಶುದ್ಧವಾಗಿರಬೇಕೆಂಬ ಮುನ್ನೆಚ್ಚರಿಕೆಯಿಂದ ಲ್ಯಾಬ್ ಟೆಸ್ಟಿಂಗ್ ಪ್ರಕ್ರಿಯೆ ನಡೆಯುತ್ತಿದ್ದು, ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಮನೆ ಮನೆಗೆ ಶಾಶ್ವತ ಕುಡಿಯುವ ನೀರು ಲಭ್ಯವಾಗಲಿದೆ.

"ಕ್ಷೇತ್ರದ ಇತಿಹಾಸದಲ್ಲೇ ಹಿಂದೆಂದೂ ಕಂಡಿರದಂತಹ ₹260 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಶಾಸಕರ ನೇತೃತ್ವದಲ್ಲಿ ನಡೆಯುತ್ತಿವೆ. ಇದನ್ನು ಸಹಿಸಲಾಗದ ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಚುನಾವಣೆ ಹತ್ತಿರ ಬರುತ್ತಿದ್ದಂತೆ ರೈತರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿವೆ. ಇಂತಹ ಪೊಳ್ಳು ವದಂತಿಗಳಿಗೆ ಜನತೆ ಕಿವಿಗೊಡಬಾರದು."
 —ಮನೋಹರಗೌಡ ಬಿಜೆಪಿ ಮುಖಂಡ.

ನೈಜ ಸುದ್ದಿಗಾಗಿ ತುಂಗಾವಾಣಿ ಓದರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize