Tunganews

ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!

ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌  ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!

ತುಂಗಾವಾಣಿ.
ಕೊಪ್ಪಳ: ಕೇಂದ್ರ ಸರ್ಕಾರದ ಯೋಜನೆಗಳ ಹೆಸರು ಹೇಳಿಕೊಂಡು ಅಮಾಯಕರನ್ನು ಜಾಲಕ್ಕೆ ಬೀಳಿಸುವ ಸೈಬರ್ ವಂಚಕರ ಕಣ್ಣು ಈಗ ಗ್ರಾಮೀಣ ಭಾಗದ ನೌಕರರ ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಮೇಲೆ ಬಿದ್ದಿದೆ. ಸರ್ಕಾರದ ಸವಲತ್ತು ಸಿಗಬಹುದೆಂಬ ನಂಬಿಕೆಯಲ್ಲಿ ಅಪರಿಚಿತ ಫೈಲ್ ಇನ್‌ಸ್ಟಾಲ್ ಮಾಡಿಕೊಂಡ ನಂತರ ಬರೋಬ್ಬರಿ ₹1,99,997 (ಸುಮಾರು 2 ಲಕ್ಷ ರೂ.) ಕಳೆದುಕೊಂಡು ಕಂಗಾಲಾಗಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಯಲಬುರ್ಗಾ ಮೂಲದ ಹನುಮಪ್ಪ ಎಂಬುವವರೇ ಖದೀಮರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ದುರ್ದೈವಿ. ಈ ಸಂಬಂಧ ಕೊಪ್ಪಳದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೌಕರರ ಸಂಘದ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಬಂತು 'ಪಿ.ಎಂ. ಕಿಸಾನ್'!
ಯಲಬುರ್ಗಾ ಹಾಗೂ ಕುಕನೂರು ಭಾಗದ ನೌಕರರ ಸಂಘ ಯಲಬುರ್ಗಾ & ಕುಕನೂರ’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಹರಿದಾಡಿದ ‘ಪಿ.ಎಮ್.ಕಿಸಾನ್.ಎಪಿಕೆ’ (PM Kisan.apk) ಎಂಬ ಹೆಸರಿನ ಆ್ಯಪ್ ಫೈಲ್ ಒಂದನ್ನು ಹರಿಬಿಟ್ಟಿದ್ದರು. ರೈತರು ಹಾಗೂ ಗ್ರಾಮೀಣ ಭಾಗದ ನೌಕರರಿಗೆ ಪರಿಚಿತವಾಗಿರುವ ಹೆಸರೇ ಆಗಿದ್ದರಿಂದ, ಇದೊಂದು ಅಧಿಕೃತ ಸರ್ಕಾರಿ ಅಪ್ಲಿಕೇಶನ್ ಇರಬಹುದೆಂದು ಭಾವಿಸಿ ಹನುಮಪ್ಪ ಅವರು ತಮ್ಮ ಮೊಬೈಲ್‌ಗೆ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ.

ನಿಮಿಷಗಳಲ್ಲಿ ಮೊಬೈಲ್ ಸ್ತಬ್ಧ: ಖಾತೆಗೆ ಕನ್ನ!
ಆ್ಯಪ್ ಇನ್‌ಸ್ಟಾಲ್ ಆಗುತ್ತಿದ್ದಂತೆಯೇ ವಂಚಕರು ಇಡೀ ಮೊಬೈಲ್‌ನ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ (ಹ್ಯಾಕ್). ಬೆನ್ನಲ್ಲೇ ಸಂತ್ರಸ್ತರ ಮೊಬೈಲ್ ನಂಬರ್ ಬ್ಲಾಕ್ ಆಗಿದ್ದು, ಫೋನ್ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಅತ್ತ ಮೊಬೈಲ್ ಕೈಕೊಟ್ಟ ಕೆಲವೇ ಕ್ಷಣಗಳಲ್ಲಿ, ಹನುಮಪ್ಪ ಅವರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹1.99 ಲಕ್ಷ ಹಣ ವಂಚಕರ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ. ಮೊಬೈಲ್‌ನಲ್ಲಿ ನೆಟ್‌ವರ್ಕ್ ಬಾರದೆ ಅನುಮಾನಗೊಂಡು ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಹಣ ಕಳ್ಳತನವಾಗಿರುವುದು ಬಯಲಿಗೆ ಬಂದಿದೆ

ಎಚ್ಚರ! ಅಪರಿಚಿತ ‘.apk’ ಫೈಲ್ ಮುಟ್ಟಲೇಬೇಡಿ

ಗೂಗಲ್ ಪ್ಲೇ ಸ್ಟೋರ್ ಹೊರತುಪಡಿಸಿ ಡೌನ್‌ಲೋಡ್ ಬೇಡಿ: ವಾಟ್ಸ್‌ಆ್ಯಪ್, ಟೆಲಿಗ್ರಾಂ ಅಥವಾ ಎಸ್‌ಎಂಎಸ್ ಮೂಲಕ ಬರುವ ಯಾವುದೇ ಆ್ಯಪ್ (.apk) ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಮಾಡಿಕೊಳ್ಳಬೇಡಿ.

ಸರ್ಕಾರಿ ಯೋಜನೆಗಳ ಹೆಸರಿನ ಆಮಿಷ: ಪಿಎಂ ಕಿಸಾನ್, ಗೃಹಲಕ್ಷ್ಮಿ, ಉಚಿತ ವಿದ್ಯುತ್ ಮುಂತಾದ ಆಕರ್ಷಕ ಹೆಸರುಗಳಲ್ಲಿ ನಕಲಿ ಲಿಂಕ್‌ಗಳನ್ನು ಗ್ರೂಪ್‌ಗಳಿಗೆ ಕಳುಹಿಸಲಾಗುತ್ತದೆ. ಇವುಗಳನ್ನು ನಂಬಿ ಕ್ಲಿಕ್ ಮಾಡಬೇಡಿ.

ಓಟಿಪಿ ಇಲ್ಲದೆಯೂ ಖಾಲಿ: ಒಮ್ಮೆ ಇಂತಹ ಮ್ಯಾಲ್‌ವೇರ್ ಆ್ಯಪ್‌ಗಳು ಫೋನ್ ಸೇರಿದರೆ, ನಿಮ್ಮ ಒಟಿಪಿ, ಪಾಸ್‌ವರ್ಡ್‌ಗಳು ತಾನಾಗಿಯೇ ಹ್ಯಾಕರ್‌ಗಳಿಗೆ ರವಾನೆಯಾಗುತ್ತವೆ.

ವಂಚನೆಯಾದರೆ ತಕ್ಷಣ ಕರೆ ಮಾಡಿ: ಸೈಬರ್ ವಂಚನೆ ಸಂಭವಿಸಿದ ಕೂಡಲೇ ಕ್ಷಣಾರ್ಧದಲ್ಲೇ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಪೋರ್ಟಲ್‌ನಲ್ಲಿ ದೂರು ದಾಖಲಿಸಿ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize