Tunganews

ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...

ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು?  ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...

ತುಂಗಾವಾಣಿ.
ಕಾರಟಗಿ: ಪಟ್ಟಣದ ಹೊರವಲಯದ ಖಾಸಗಿ ವಸತಿ ಶಾಲೆಯ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಅವರನ್ನು ಯಾರೂ ಅಪಹರಿಸಿಲ್ಲ; ಬದಲಿಗೆ ಅವರೇ ಸ್ವತಃ ಹಾಸ್ಟೆಲ್‌ನಿಂದ ಪರಾರಿಯಾಗಿದ್ದರು ಎಂಬ ಸತ್ಯ ಬಯಲಾಗಿದೆ. ವಿಜಯವಾಡ ರೈಲ್ವೆ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಇಬ್ಬರೂ ಬಾಲಕರು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಚೆನ್ನಳ್ಳಿ ಕ್ರಾಸ್‌ನಲ್ಲಿರುವ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಕಾರಟಗಿಯ ಜೀವನ್ ಸುರೇಶ ಸಜ್ಜನ್ ಹಾಗೂ ಮಸ್ಕಿ ತಾಲೂಕಿನ ತುಗ್ಗಲದಿನ್ನಿ ಗ್ರಾಮದ ಚೇತನ್ ಪೊಲೀಸ್ ಪಾಟೀಲ್ ಗುರುವಾರ ಮಧ್ಯರಾತ್ರಿ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದರು. ಆದರೆ, ಶಾಲೆ ವಸತಿ ನಿಲಯದ ಮೇಲ್ವಿಚಾರಕ ಜಗದೀಶ ಚಂಡಿ, ‘ಮಕ್ಕಳನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ’ ಎಂದು ಶುಕ್ರವಾರ ಮಧ್ಯಾಹ್ನ ಕಾರಟಗಿ ಠಾಣೆಗೆ ತಡವಾಗಿ ದೂರು ನೀಡಿದ್ದರು.

ಆಡಳಿತ ಮಂಡಳಿ ಲೋಪ ಮುಚ್ಚಿಕೊಳ್ಳಲು ‘ಕಿಡ್ನ್ಯಾಪ್’ ಕಥೆ?
ಮಧ್ಯರಾತ್ರಿಯೇ ಮಕ್ಕಳು ಶಾಲೆಯ ಕಾಂಪೌಂಡ್ ಗೋಡೆ ಜಿಗಿದು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ರಾತ್ರಿ ವೇಳೆಯಲ್ಲಿ ಮುಖ್ಯದ್ವಾರ ತೆರೆದಿದ್ದೇಕೆ? ಮಧ್ಯಾಹ್ನದವರೆಗೂ ಹುಡುಕಾಟದ ನೆಪವೊಡ್ಡಿ ತಡವಾಗಿ ದೂರು ದಾಖಲಿಸಿದ್ದೇಕೆ? ಎಂಬ ಪ್ರಶ್ನೆಗಳು ಎದ್ದಿವೆ. ಶಾಲಾ ಆಡಳಿತ ಮಂಡಳಿ ಹಾಗೂ ವಾರ್ಡನ್ ತಮ್ಮ ಭದ್ರತಾ ಲೋಪವನ್ನು ಮುಚ್ಚಿಹಾಕಲು ಮತ್ತು ತಾವು ‘ಸೇಫ್’ ಆಗಲು ಅಪಹರಣದ ಸುಳ್ಳು ದೂರು ನೀಡಿದ್ದಾರೆ ಎಂದು ಪಾಲಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಜವಾಬ್ದಾರಿತನ ತೋರಿದ ಶಾಲಾ ಸಿಬ್ಬಂದಿ ವಿರುದ್ಧ ಪೊಲೀಸರೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಮಕ್ಕಳು ಸಿಕ್ಕಿದ್ದು ರೋಚಕ:
ಪೊಲೀಸ್ ತನಿಖೆ ಮತ್ತು ಕುಟುಂಬಸ್ಥರ ಮಾಹಿತಿ ಪ್ರಕಾರ, ಈ ಇಬ್ಬರೂ ಬಾಲಕರು ಹಾಸ್ಟೆಲ್‌ನಿಂದ ಹೊರಹೋಗಲು ಒಂದು ವಾರದ ಹಿಂದೆಯೇ ಯೋಜನೆ ರೂಪಿಸಿದ್ದರು.

ಕಾರಟಗಿಯಿಂದ ಹೊಸಪೇಟೆಗೆ ತೆರಳಿದ ಬಾಲಕರು, ಬೆಳಗಿನ ಜಾವ 3.45ರ ಸುಮಾರಿಗೆ ಗುಂತಕಲ್–ವಿಜಯವಾಡ ರೈಲು ಹತ್ತಿದ್ದಾರೆ.

ಗುಂತಕಲ್ ಸಮೀಪಿಸುತ್ತಿದ್ದಂತೆ, ರೈಲಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರ ಮೊಬೈಲ್ ಪಡೆದು ಕಾರಟಗಿಯಲ್ಲಿದ್ದ ತಮ್ಮ ಗೆಳೆಯನಿಗೆ ಕರೆ ಮಾಡಿ, "2 ಸಾವಿರ ರೂಪಾಯಿ ಫೋನ್‌ಪೇ ಮಾಡು" ಎಂದು ಕೇಳಿದ್ದಾರೆ.

ಆ ಗೆಳೆಯ ತನ್ನ ತಂದೆಗೆ ಈ ವಿಷಯ ತಿಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಬಾಲಕರ ಫೋಟೋ ಗಮನಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಆ ಮೊಬೈಲ್ ಸಂಖ್ಯೆಗೆ ಮರುಕರೆ ಮಾಡಿದಾಗ, "ನಾನು ಗುಂತಕಲ್‌ನಲ್ಲಿ ಇಳಿದಿದ್ದೇನೆ, ಮಕ್ಕಳು ರೈಲಿನಲ್ಲಿ ಮುಂದೆ ಪ್ರಯಾಣಿಸುತ್ತಿದ್ದಾರೆ" ಎಂದು ಮಹಿಳೆ ತಿಳಿಸಿದ್ದಾರೆ.

ತಕ್ಷಣವೇ ಆಕೆಯ ಟಿಕೆಟ್ ವಿವರ ಪಡೆದುಕೊಂಡ ಪೋಷಕರು ಮತ್ತು ಪೊಲೀಸರು, ಮುಂದೆ ಬರುವ ವಿಜಯವಾಡ ರೈಲ್ವೆ ಪೊಲೀಸರಿಗೆ ಬಾಲಕರ ಛಾಯಾಚಿತ್ರ ರವಾನಿಸಿ ಅಲರ್ಟ್ ಮಾಡಿದ್ದಾರೆ.

ವಿಜಯವಾಡ ರೈಲ್ವೆ ಪೊಲೀಸರು ರೈಲು ನಿಲ್ದಾಣ ತಲುಪುತ್ತಿದ್ದಂತೆ ಇಬ್ಬರೂ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಸುರಕ್ಷಿತವಾಗಿರಿಸಿದ್ದಾರೆ. ಸದ್ಯ ಮಕ್ಕಳನ್ನು ಕರೆತರಲು ಕುಟುಂಬಸ್ಥರು ವಿಜಯವಾಡಕ್ಕೆ ತೆರಳಿದ್ದಾರೆ. ಸಧ್ಯಕ್ಕೆ ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಐ ಸುಧೀರ್ ಬೆಂಕಿ ಹಾಗು ಡಿವೈಎಸ್‌ಪಿ ನ್ಯಾಮಗೌಡ ರವರು ಯಾವ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಕಾದು ನೋಡಬೇಕಿದೆ.?

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize