Tunganews

ಗಂಗಾವತಿಗೆ ಹಬ್ಬದ ಖರೀದಿಗೆ ಬಂದರೆ ಅಸ್ಥಮಾ ಉಚಿತ.

ಗಂಗಾವತಿಗೆ ಹಬ್ಬದ ಖರೀದಿಗೆ ಬಂದರೆ ಅಸ್ಥಮಾ ಉಚಿತ.

ತುಂಗಾವಾಣಿ
ಗಂಗಾವತಿ ಅ 17 ಸಡಗರ ಸಂಭ್ರಮದ, ದೀಪಗಳ ಹಬ್ಬ ದೀಪಾವಳಿಗೆ ಬೆರಳಣಿಕೆ ದಿನಗಳು‌ ಉಳಿದಿವೆ, ನಗರದ  ಬಜಾರುಗಳು ಗ್ರಾಹಕರಿಂದ ತುಂಬಿತುಳುಕುತ್ತಿವೆ, ಗ್ರಾಹಕರನ್ನು ತಮ್ಮತ್ತ ಸೆಳೆಯಲು ಅಂಗಡಿಕಾರರು ಆಯ್ದ ವಸ್ತುಗಳಿಗೆ, ಬಟ್ಟೆಗಳಿಗೆ ಡಿಸ್ಕೌಂಟ್ ಕೊಡುತ್ತಾ ಗ್ರಾಹಕರಿಗೆ ಖುಷಿಪಡಿಸುತ್ತಿದ್ದಾರೆ, ಈ ನಡುವೆ ಮುಖ್ಯರಸ್ತೆಗಳ ಮೇಲೆ ಆವರಿಸಿರುವ ಧೂಳು ಮಣ್ಣಿನಿಂದಾಗಿ ಹಬ್ಬದ ಗ್ರಾಹಕರಿಗೆ ಕೇಳದಿದ್ದರೂ ಕೂಡ ದಮ್ಮು ಅಸ್ಥಮಾ ದಂತಹ ರೋಗಗಳನ್ನು ಉಚಿತವಾಗಿ ಮತ್ತು ಧೂಳು ಬಿದ್ದ ಕಣ್ಣುಗಳಿಗೆ ಚಸ್ಮಾ ಖಚಿತವಾಗಿದೆ.
   
    ಕಳೆದ ಎರಡೂ ಮೂರು ವರ್ಷಗಳಿಂದ ನಗರದ ರಸ್ತೆಗಳ ಅಭಿವೃದ್ಧಿ ಕುಂಟಿತವಾಗಿ ಎಲ್ಲಾ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ, ಕಳೆದ ವರ್ಷ ಇದೇ ದೀಪಾವಳಿ ಸಂದರ್ಭದಲ್ಲಿ ಗಂಗಾವತಿ  ನ್ಯಾಯಾಲಯದ ಮಾನ್ಯ ನ್ಯಾಯಾಧೀಶರು ಹಾಳಾದ ರಸ್ತೆಗಳನ್ನು ತುರ್ತಾಗಿ ಸರಿಪಡಿಸಲು  ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು ಆದರೂ ಸಹ ಅಧಿಕಾರಿಗಳು ರಸ್ತೆ ದುರಸ್ಥಿಗೊಳಿಸಿಲ್ಲ,  ಆ ಸಮಯ ಯಾವಾಗ ಬರುತ್ತದೋ ದೇವರಿಗೆ ಗೊತ್ತು, ಅದರ ಜೊತೆ ಬೋನಸ್ ಎಂಬಂದೆ ರಸ್ತೆಗಳ ಮೇಲೆ ಧೂಳು - ಮಣ್ಣು ಆವರಿಸಿಕೊಂಡು ಸಂಪೂರ್ಣ ಪರಿಸರ ಧೂಳುಮಯವಾಗಿವೆ, 
     ನಗರದ ನಾಗರೀಕರೂ ಧೂಳು ನುಂಗಿ ನುಂಗಿ ದಮ್ಮು ಅಸ್ಥಮಾ ದಂತಹಾ ರೋಗಗಳಿಗೆ ತುತ್ತಾಗುತ್ತಿರುವುದು  ನಗರಸಭೆ ಅಧಿಕಾರಿಗಳಿಗೆ ಕಾಣುತ್ತಿಲ್ಲ ಏಕೆಂದರೆ ನಗರಸಭೆಯ ಎಲ್ಲಾ ಮೇಲಾಧಿಕಾರಗಳಿಗೆ *ಸರ್ಕಾರ ಹವಾನಿಯಂತ್ರಿತ ಕಾರುಗಳ ವ್ಯವಸ್ಥೆ* ಮಾಡಿದ್ದು , ಪರಿಸರ ಅಭಿಯಂತರಿಂದ ಹಿಡಿದು ಪೌರಾಯುಕ್ತರ ವರೆಗೂ ಎಲ್ಲರೂ ಕಾರುಗಳ ಕೂಲಿಂಗ್ ಗ್ಲಾಸ್ ಮುಚ್ಚಿಕೊಂಡು ತಿರುಗುತ್ತಾ ನಗರದ ಸಮಸ್ಯೆಯನ್ನೇ ಮರೆಮಾಚುತ್ತಿದ್ದಾರೆ.
   ಸರ್ಕಾರವು ನಗರಸಭೆಗೆ  ಸ್ವಚ್ಛ ಭಾರತ ಅನುದಾನದಲ್ಲಿ *ಧೂಳು ಎಳೆಯುವ ವಾಹನ ( dust suction vehicle )* ಪೋರೈಸಲಾಗಿದ್ದು ಆ ವಾಹನಗಳ ಮೇಲೆಯೂ ಸಹ ಧೂಳ ಆವರಿಸಿದೆ.
  ಈ ಕೆಲ ವರ್ಷಗಳ ಹಿಂದೆ ಕಾಲಕಾಲಕ್ಕೆ ಸ್ವಚ್ಚತಾ ಸಿಬ್ಬಂದಿಯಿಂದ ಮುಖ್ಯರಸ್ಥೆಗಳ ಮೇಲಿನ ಮಣ್ಣು ಧೂಳನ್ನು ಸ್ವಚ್ಚ ಮಾಡಲಾಗುತ್ತಿತ್ತು, ಅಂದಿನ ನಗರಸಭೆ ಅಧ್ಯಕ್ಷರುಗಳಾಗಿದ್ದ ಶಾಮಿದ್ ಮನಿಯಾರ್, ರಾಘವೇಂದ್ರ ಶೆಟ್ಟಿ  ಖುದ್ದು ತಾವೇ ಗಾಂಧಿವೃತ್ತದಲ್ಲಿ ನಿಂತು ಅಧಿಕಾರಿಗಳನ್ನು ಕರೆಯಿಸಿಕೊಂಡು ಸ್ವಚ್ಚತಾ ಸಿಬ್ಬಂಧಿಯಿಂದ ರಸ್ತೆಗಳ ಮೇಲಿನ ಧೂಳನ್ನು ತೆಗೆಯಿಸುತ್ತಿದ್ದರು, ಈಗ ಉನ್ನತ ತಂತ್ರಜ್ಞಾನದ ವಾಹನಗಳು ನಗರಸಭೆಗೆ ಬಂದಿದ್ದರೂ ಸಹ ನಗರಸಭೆ ಆಡಳಿತ ಮಂಡಳಿಗೆ ಆಗಲಿ, ಪರಿಸರ ಇಂಜಿನಿಯರ್, ಅಥವಾ ಪೌರಾಯುಕ್ತರಿಗಾಗಲಿ ರಸ್ತೆ ಸ್ವಚ್ಚತಾ ಕಾಳಜಿ ಕಂಡುಬರುತ್ತಿಲ್ಲ, ನಗರದ ನಾಗರೀಕರು ಸೋಷಿಯಲ್ ಮಿಡಿಯಾಗಳಲ್ಲಿ ರಸ್ತೆಗಳ ಮೇಲಿನ ಧೂಳಿನ ಬಗ್ಗೆ ತಮ್ಮ ಅಸಮಧಾನ ತೋಡಿಕೊಂಡರೂ ಕೂಲಿಂಗ್ ಗ್ಲಾಸ್ ಒಳಗಿನ ಅಧಿಕಾರಿಗಳಿಗೆ ನಾಚಿಕೆ ಬರುತ್ತಿಲ್ಲ.

ನೈಜ ಸುದ್ದಿಗಾಗಿ ತುಂಗಾವಾಣಿ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize