Tunganews

ಕೊಟ್ಟ ಭರವಸೆಗಳನ್ನು ಈಡೇರಿಸದ ಶಾಸಕ ಕೂಡಲೆ ರಾಜಿನಾಮೆ ನೀಡಲಿ.

ಕೊಟ್ಟ ಭರವಸೆಗಳನ್ನು ಈಡೇರಿಸದ ಶಾಸಕ ಕೂಡಲೆ ರಾಜಿನಾಮೆ ನೀಡಲಿ.

ತುಂಗಾವಾಣಿ
ಗಂಗಾವತಿ ನ-25 ಗಂಗಾವತಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ದೊಡ್ಡ ದೊಡ್ಡ ಆಸೆ ತೋರಿಸಿ ಚುನಾವಣೆ ಗೆದ್ದು ಶಾಸಕರಾದ ಜನಾರ್ದನ ರೆಡ್ಡಿಯವರು ಇಲ್ಲಿಯವರೆಗೂ ಒಂದೂ ಭರವಸೆಯನ್ನು  ಈಡೇರಿಸಿಲ್ಲ, ರಾಜಕೀಯ ಪುನರ್ಜನ್ಮ ನೀಡಿದ ಗಂಗಾವತಿ ಕ್ಷೇತ್ರದ ಜನತೆಯ ಋಣವನ್ನು ಶಾಸಕರು ಮರೆತಿದ್ದಾರೆ, ಅವರು ತಕ್ಷಣ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮೀತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಒತ್ತಾಯಿಸಿದರು,
  
   ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ಇರುವ ಬಸವೇಶ್ವರ ಮೂರ್ತಿಯ ಮುಂದೆ ಜಿಲ್ಲಾ ಘಟಕದ ವತಿಯಿಂದ ಸಾಂಕೇತಿಕ ಧರಣಿ ನಡೆಸಿ ಮಾತನಾಡಿದ ಬಸಬರಾಜ ಮ್ಯಾಗಳಮನಿ ಶಾಸಕರು ಚುನಾವಣೆ ಸಂದರ್ಭದಲ್ಲಿ ವಸತಿ ರಹಿತರಿಗೆ ಡಬಲ್ ಬೆಡ್ ರೂಮಿನ ಮನೆ, ನಿರುದ್ಯೋಗಿ ಯುವಕರಿಗಾಗಿ ಕೈಗಾರಿಗಾ ಕಾರ್ಖಾನೆಗಳ ಸ್ಥಾಪನೆ, ಮಹಿಳೆಯರಿಗಾಗಿ ರೆಡಿಮೇಡ್ ಬಟ್ಟೆ ತಯಾರಿಕಾ ಘಟಕಗಳ ಸ್ಥಾಪನೆ, ನೂತನ ತಹಶಿಲ್ದಾರರ ಕಛೇರಿ ನಿರ್ಮಾಣ, ಮುಖ್ಯರಸ್ತೆಗಳ ಟ್ರಾಫಿಕ್ ತಪ್ಪಿಸಲು ಬೀದಿ ಬದಿ ವ್ಯಾಪಾರಿಗಳಿಗೆ ಸಿಟಿ ಮಾರ್ಕೆಟ್ ಗೆ ಸ್ಥಳಾಂತರಿಸುವುದು, ಸರ್ಕಾರಿ ಶಾಲೆಗಳ‌ ನವೀಕರಣ, ಸೇರಿದಂತೆ ಅನೇಕ ಭರವಸೆಗಳನ್ನು ಶಾಸಕರು ನೀಡಿದ್ದರು ಆದರೆ ಭರವಸೆಗಳನ್ನು ಈಡೇರಿಸುವುದು ಒಂದೆಡೆ ಇರಲಿ, ಜನರ ಸಮಸ್ಯೆ ಆಲಿಸುವಲ್ಲಿಯೂ ಶಾಸಕರು ನಿರ್ಲಕ್ಷವಹಿಸುತ್ತಿದ್ದಾರೆ, ನಗರದ ರಸ್ತೆಗಳು ಸಂಪೂರ್ಣ ಹಾಳಾಗಿವೆ, ಮುಖ್ಯರಸ್ತೆಗಳಲ್ಲಿ ಮಣ್ಣು ಶೇಖರಣೆಯಾಗಿ ಧೂಳುಮಯವಾಗಿವೆ, ಶಾಸಕರು ಯಾವುದೇ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಕೊಟ್ಟ ಭರವಸೆಗಳನ್ನು‌ ಈಡೇರಿಸದ ಶಾಸಕರು‌ ಕೂಡಲೇ ಶಾಸಕ‌ ಸ್ಥಾನಕ್ಕೆ  ರಾಜೀನಾಮೆ ನೀಡಬೇಕೆಂದರು.
ಈ ಸಂದರ್ಭದಲ್ಲಿ ಜಡಿಯಪ್ಪ ಹಂಚಿನಾಳ, ಬಸವರಾಜ ನಾಯಕ, ರಾಮಣ್ಣ ರುದ್ರಾಕ್ಷಿ, ರಾಘವೇಂದ್ರ ಕಡೆಬಾಗಿಲು, ಅರವಿಂದ ಯೋಗಿ, ಹನುಮೇಶ ಕಾಟಾಪುರ, ಭೋಗೇಶ, ಜಂಬಣ್ಣ ಸಿಂದೊಳ್ಳಿ, ರಮೇಶ ಜಂತಗಲ್, ಬಸವರಾಜ್ ಚನ್ನಳ್ಳಿ ಇದ್ದರು.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 16 2026 7:38PM | ಅಪರಾಧ | - ಗಂಗಾವತಿ: ಮಧ್ಯರಾತ್ರಿಯ ಆಪರೇಷನ್, ಬೆಳಗಾಗುವುದರೊಳಗೆ ‘ಸೆಟಲ್‌ಮೆಂಟ್’? ತಹಶೀಲ್ದಾರ್ ಸಾಹೇಬರೇ, ಮರಳು ಮಾಫಿಯಾ ಮುಂದೆ ಕಾನೂನು ಮಂಡಿಯೂರಿತೇ?
Nov 4 2026 10:00PM | ರಾಜ್ಯ | ಗಂಗಾವತಿ ಚಿಕ್ಕಬೆಣಕಲ್ ಪಿಡಿಒ ಕಿರುಕುಳಕ್ಕೆ ಸಿಡಿದೆದ್ದ ಗ್ರಾ.ಪಂ ಸಿಬ್ಬಂದಿ: ತಾ.ಪಂ ಮುಂದೆ ಸಾಂಕೇತಿಕ ಧರಣಿ
Nov 3 2026 12:24PM | ಅಪರಾಧ | - ಕೊಪ್ಪಳ: ಬಡತನ ಮೆಟ್ಟಿ ನಿಂತ ವೈದ್ಯ ವಿದ್ಯಾರ್ಥಿಗೆ ವಂಚನೆಯ ಶಾಕ್: ರಾಯರ ಮಠದ ಹೆಸರಲ್ಲಿ ಬಲೆ ಬೀಸಿದ ಖದೀಮರು
Nov 2 2026 12:16PM | ಅಪರಾಧ | - ಗಿಣಿಗೇರಾ ಬಳಿ ಭೀಕರ ಅಪಘಾತ: ಗಂಗಾವತಿಯ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ!
Oct 31 2026 11:35AM | ಅಪರಾಧ | - ಕಾರಟಗಿ ವಿದ್ಯಾರ್ಥಿಗಳ ‘ಕಿಡ್ನ್ಯಾಪ್’ ಕಥೆಗೆ ಬಿಗ್ ಟ್ವಿಸ್ಟ್: ಅಪಹರಣದ ಅಸಲಿ ಕಥೆ ಕಟ್ಟಿದ್ದು ಯಾರು? ಮಕ್ಕಳ ರೋಚಕ ಪಯಣದ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ...
Oct 31 2026 8:12AM | ಅಪರಾಧ | - ಖಾಕಿ ಬಲೆಗೆ ಬಿದ್ದ ಗಂಗಾವತಿಯ ಖತರ್ನಾಕ್ ಕಳ್ಳ: ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!
Oct 29 2026 5:50PM | ರಾಜ್ಯ | - ಕನಕಗಿರಿ: ಸಚಿವರ ಕ್ಷೇತ್ರದಲ್ಲೇ ನಾರುತ್ತಿದೆ ‘ಸ್ವಚ್ಛ ಭಾರತ’ದ ಬಂಡವಾಳ! ಹೊಸಕೇರಾ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರಿನ ಸಾಮ್ರಾಜ್ಯ: ಪಂಚಾಯತಿ ಕಣ್ಣೆದುರೇ ಸಾವಿರಾರು ಗ್ರಾಮಸ್ಥರ ನರಕಯಾತನೆ
Oct 23 2026 10:27PM | ಅಪರಾಧ | - ಕೊಪ್ಪಳದ 12 ಹೋಟೆಲ್‌ಗಳಿಗೆ ₹2.45 ಲಕ್ಷ ದಂಡ!
Oct 23 2026 10:44AM | ಅಪರಾಧ | - ಕೊಪ್ಪಳ: ನೌಕರರ ಸಂಘದ ಗ್ರೂಪ್‌ನಲ್ಲಿ ಹರಿದಾಡಿದ ಮೋಸದ ಲಿಂಕ್‌ ಫೈಲ್‌ ಡೌನ್‌ಲೋಡ್ ಬೆನ್ನಲ್ಲೇ ಮೊಬೈಲ್‌ ಹ್ಯಾಕ್‌, ನಂಬರ್‌ ಬ್ಲಾಕ್‌, ₹2 ಲಕ್ಷ ಗುಳುಂ!
Oct 22 2026 8:05PM | ಅಪರಾಧ | - ಕೊಪ್ಪಳ: ಪ್ರೀತಿಸಿ ಕೈಕೊಟ್ಟಿದ್ದ ಪ್ರಿಯಕರ ಸೇರಿ ಮೂವರ ಬಂಧನ.!




Copyright © 2026 ತುಂಗವಾಣಿ ನ್ಯೂಸ್. All Rights Reserved.
Designed & Developed by We Make Digitize